ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ ಸೆಮಿಫೈನಲ್ ಗೆ

ಒಡೆನ್ಸ್, ಅಕ್ಟೋಬರ್ 20: ಒಡೆನ್ಸ್ ನಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ರೋಚಕ ಕಾಳಗದಲ್ಲಿ ಸೈನಾ, ಜಪಾನ್ ಬಲಾಡ್ಯೆ ನೋಜೊಮಿ ಒಕುಹರಾ ವಿರುದ್ಧ 17-21, 21-16, 21-12 ಗೆಲುವು ದಾಖಲಿಸಿದರು. ಇಬ್ಬರ ನಡುವೆ 58 ನಿಮಿಷಗಳ ಭರ್ಜರಿ ಕಾದಾಟ ನಡೆಯಿತು.
ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಕಿದಂಬಿ ಶ್ರೀಕಾಂತ್ ಅವರು ನಮ್ಮದೇ ದೇಶದ ಮತ್ತೊಬ್ಬ ಆಟಗಾರ ಸಮೀರ್ ವರ್ಮಾ ವಿರುದ್ಧ ರೋಚಕ ಜಯ ಸಾಧಿಸಿದರು. ವರ್ಮಾ ಎದುರು ಶ್ರೀಕಾಂತ್, 22-20, 19-21, 23-21ರ ಅಂತರದಿಂದ ಪಂದ್ಯ ಗೆದ್ದುಕೊಂಡರು. ಇಬ್ಬರ ನಡುವೆ 1 ಗಂಟೆ 18 ನಿಮಿಷಗಳ ಪ್ರಚಂಡ ಕಾಳಗ ನಡೆಯಿತು.
Story first published: Saturday, October 20, 2018, 14:40 [IST]
Other articles published on Oct 20, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications