Singapore Open 2024: ಆರಂಭಿಕ ಸುತ್ತಿನಲ್ಲೇ ಸೋತು ಹೊರಬಿದ್ದ ವಿಶ್ವದ ನಂ.1 ಜೋಡಿ ಸಾತ್ವಿಕ್ -ಚಿರಾಗ್
ಮೇ 29 ಬುಧವಾರ, ಸಿಂಗಾಪುರ ಓಪನ್ ಸೂಪರ್ 700 ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್‌ನಲ್ಲಿ ವಿಶ್ವದ ನಂ.1 ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಂಗಳವಾರ ಆರಂಭಿಕ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
34 ನೇ ಶ್ರೇಯಾಂಕದ ಡೆನ್ಮಾರ್ಕ್‌ನ ಡೇನಿಯಲ್ ಲುಂಡ್‌ಗಾರ್ಡ್ ಮತ್ತು ಮ್ಯಾಡ್ಸ್ ವೆಸ್ಟರ್‌ಗಾರ್ಡ್ ವಿರುದ್ಧ ಆಗ್ರಮಾನ್ಯ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಅನಿರೀಕ್ಷಿತ ಸೋಲು ಕಂಡಿದ್ದಾರೆ. ಈ ಸೋಲಿನ ಮೂಲಕ ಸಿಂಗಪುರ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಚಿನ್ನದ ಪದಕ ಗೆಲ್ಲುವ ಪ್ರಬಲ ಸ್ಪರ್ಧಿಗಳಲ್ಲಿ ಒಂದಾದ ಭಾರತದ ಸ್ಟಾರ್ ಜೋಡಿ ಸಾತ್ವಿಕ್-ಚಿರಾಗ್ ಈ ತಿಂಗಳ ಆರಂಭದಲ್ಲಿ ಥಾಯ್ಲೆಂಡ್ ಓಪನ್ ಸೂಪರ್ 500 ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಆದರೆ, ಸಿಂಗಾಪುರ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಈ ಜೋಡಿ ನಿರಾಸೆ ಅನುಭವಿಸಿದೆ. ಡ್ಯಾನಿಶ್ ಜೋಡಿ ವಿರುದ್ಧ 47 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 20-22, 18-21 ನೇರ ಸೆಟ್‌ಗಳಿಂದ ಸೋತರು.
ಈ ಋತುವಿನ ಮಾರ್ಚ್‌ನಲ್ಲಿ ನಡೆದ ಫ್ರೆಂಚ್ ಓಪನ್ ಸೂಪರ್ 750 ನಲ್ಲಿ ಜಯಗಳಿಸಿದ ನಂತರ ಸಾತ್ವಿಕ್-ಚಿರಾಗ್ ಜೋಡಿಗೆ ಥಾಯ್ಲೆಂಡ್ ಓಪನ್ ಸೂಪರ್ 500 ಎರಡನೇ ಪ್ರಶಸ್ತಿಯಾಗಿದೆ. ಈಗಾಗಲೇ ಮಲೇಷ್ಯಾ ಸೂಪರ್ 1000 ಮತ್ತು ಇಂಡಿಯಾ ಸೂಪರ್ 750 ನಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಸಿಂಗಪುರ ಓಪನ್ ಟೂರ್ನಿಯಲ್ಲಿ ಉತ್ತಮ ಆರಂಭ ಸಿಕ್ಕಿಲ್ಲ.
ಈ ಜೋಡಿಯನ್ನು ಹೊರತುಪಡಿಸಿ, ಸೂಪರ್ 750 ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ ಭಾರತದ ಷಟ್ಲರ್‌ಗಳು ಕೂಡ ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದಾರೆ. ಆಕರ್ಷಿ ಕಶ್ಯಪ್ ಮತ್ತು ಪ್ರಿಯಾಂಶು ರಾಜಾವತ್ ಕೂಡ ತಮ್ಮ ವಿಭಾಗಗಳಲ್ಲಿ ಮೊದಲ ಸುತ್ತಲ್ಲಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.
ಮಹಿಳೆಯರ ಸಿಂಗಲ್ಸ್‌ನಲ್ಲಿ 41ನೇ ಶ್ರೇಯಾಂಕದ ಆಕರ್ಷಿ ಥಾಯ್ಲೆಂಡ್‌ನ ಪೋರ್ನ್‌ಪಿಚಾ ಚೋಕೆವಾಂಗ್ ವಿರುದ್ಧ 7-21, 15-21 ಅಂತರದಲ್ಲಿ ಸೋಲನುಭವಿಸಿದರೆ, ಪುರುಷರ ಸಿಂಗಲ್ಸ್‌ನಲ್ಲಿ 42ನೇ ಶ್ರೇಯಾಂಕದ ರಾಜಾವತ್ ಅವರು ಹಾಂಕಾಂಗ್‌ನ ಲೀ ಚೆಯುಕ್ ಯಿಯು ವಿರುದ್ಧ 21-23, 19-21 ಅಂತರದಲ್ಲಿ ಸೋತರು.
ಮಹಿಳೆಯರ ಡಬಲ್ಸ್‌ನಲ್ಲಿ ರುತುಪರ್ಣ ಪಾಂಡಾ ಮತ್ತು ಶ್ವೇತಪರ್ಣ ಪಾಂಡಾ ಅವರು ಚೀನದ ತೈಪೆಯ ಚಾಂಗ್ ಚಿಂಗ್ ಹುಯಿ ಮತ್ತು ಯಾಂಗ್ ಚಿಂಗ್ ತುನ್ ವಿರುದ್ಧ 12-21, 21-12, 13-21 ಸೆಟ್‌ಗಳಿಂದ ಸೋತರು. ಮಿಶ್ರ ಡಬಲ್ಸ್‌ನಲ್ಲಿ ಅಸಿತ್ ಸೂರ್ಯ ಮತ್ತು ಅಮೃತಾ ಪ್ರಮಥೇಶ್ ಅವರು ಹಾಂಕಾಂಗ್‌ನ ಲೀ ಚುನ್ ಹೇ ರೆಜಿನಾಲ್ಡ್ ಮತ್ತು ಎನ್‌ಜಿ ತ್ಸೆ ಯೌ ವಿರುದ್ಧ 8-21, 17-21 ಸೆಟ್‌ಗಳಿಂದ ಸೋತರು.
ಇಂದು (ಬುಧವಾರ) ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಪಿವಿ ಸಿಂಧು, ಲಕ್ಷ್ಯ ಸೇನ್ ಮತ್ತು ಎಚ್‌ಎಸ್ ಪ್ರಣಯ್ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಜೊತೆಗೆ ಆರಂಭಿಕ ಸುತ್ತನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications