ಭಾರತದ ಸ್ಟಾರ್ ಶಟ್ಲರ್ ಮನೆಯಲ್ಲಿ ಮಡುಗಟ್ಟಿದ ಶೋಕ
ಭಾರತದ ಸ್ಟಾರ್ ಶಟ್ಲರ್ ಮೇಲೆ ದುಃಖದ ಪರ್ವತ ಬಿದ್ದಿದೆ. ಏಷ್ಯನ್ ಗೇಮ್ಸ್ ಚಾಂಪಿಯನ್ ಸ್ಟಾರ್ ಶಟ್ಲರ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದು, ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಈ ಸ್ಟಾರ್ ಶಟ್ಲರ್ ಬೇರೆ ಯಾರೂ ಅಲ್ಲ, ಭಾರತದ ಚಾಂಪಿಯನ್ ಶಟ್ಲರ್ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ. ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರ ತಂದೆ ಆರ್ ಕಾಶಿ ವಿಶ್ವನಾಥಮ್ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ 43ನೇ ಪಿಎಸ್‌ಪಿಬಿ ಅಂತರ-ಘಟಕ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಲು ಹೊರಟಿದ್ದರು. ಆದರೆ ತನ್ನ ತಂದೆಯ ಮರಣದ ಸುದ್ದಿ ಕೇಳಿ ಅವರು ಆಂಧ್ರಪ್ರದೇಶದಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಇಂದು ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು.

ಆರ್ ಕಾಶಿ ವಿಶ್ವನಾಥಮ್ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ಅವರು ತಮ್ಮ ಮಗನ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸಲು ಸಿದ್ಧರಾಗಿದ್ದರು. ಆದರೆ ಅವರು ಪ್ರವಾಸ ಕೈಗೊಳ್ಳುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. 'ಸಾತ್ವಿಕ್ ಇಂದು ಬೆಳಿಗ್ಗೆ ತನ್ನ ತಂದೆಯನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ' ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಸಾತ್ವಿಕ್ ಭಾರತದ ಪರ ಪುರುಷರ ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ ಜೊತೆಗೆ ಆಡುತ್ತಾರೆ. ಅವರು 2022 ರ ಏಷ್ಯನ್ ಕ್ರೀಡಾಕೂಟ, 2022 ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2023 ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕವನ್ನು ಗೆದ್ದು ಐತಿಹಾಸಿ ಸಾಧನೆ ಮಾಡಿದ್ದಾರೆ.
ಬಿಡಬ್ಲ್ಯೂಎಫ್ ವಿಶ್ವ ಶ್ರೇಯಾಂಕದಲ್ಲಿ ನಂ. 1 ಸ್ಥಾನ ಪಡೆದ ಮತ್ತು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 1000 ಪ್ರಶಸ್ತಿಯನ್ನು ಗೆದ್ದ ಏಕೈಕ ಭಾರತೀಯ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆ ಸಾತ್ವಿಕ್ ಮತ್ತು ಚಿರಾಗ್ ಪಾತ್ರರಾಗಿದ್ದಾರೆ. ಸಾತ್ವಿಕ್ 2023ರಲ್ಲಿ ಗಂಟೆಗೆ 565 ಕಿಮೀ ವೇಗದಲ್ಲಿ ಬ್ಯಾಡ್ಮಿಂಟನ್ ಸ್ಮ್ಯಾಶ್ ಮಾಡುವ ಮೂಲಕ ಪುರುಷ ಆಟಗಾರನೊಬ್ಬ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications