ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್ ಸೂಪರ್ 750 ಗೆದ್ದು ಇತಿಹಾಸ ನಿರ್ಮಿಸಿದ ಸಾತ್ವಿಕ್‌ ಮತ್ತು ಚಿರಾಗ್ ಶೆಟ್ಟಿ

Shuttlers Satwiksairaj And Chirag Won French Open Super 750 Mens Double

ಭಾನುವಾರ ಪ್ಯಾರಿಸ್‌ನಲ್ಲಿ ನಡೆದ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ಅವರನ್ನು ನೇರ ಗೇಮ್‌ನಲ್ಲಿ ಸೋಲಿಸುವ ಮೂಲಕ ಫ್ರೆಂಚ್ ಓಪನ್ ಸೂಪರ್ 750 ಕಿರೀಟವನ್ನು ಗೆದ್ದರು.

2019 ರ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ವಿಶ್ವದ 8 ನೇ ಶ್ರೇಯಾಂಕದ ಜೋಡಿ, 48 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ 25 ನೇ ಶ್ರೇಯಾಂಕದ ಲು ಮತ್ತು ಯಾಂಗ್ ಅವರನ್ನು 21-13 21-19 ರಿಂದ ಸೋಲಿಸಿದರು.

ಈ ಮೂಲಕ ಭಾರತದ ಜೋಡಿಯು ಈ ವರ್ಷ ತಮ್ಮ ದಾಖಲೆಯನ್ನು ಬರೆದಿದ್ದಾರೆ. ಇಂಡಿಯನ್ ಓಪನ್ ಸೂಪರ್ 500 ಪ್ರಶಸ್ತಿ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ಥಾಮಸ್ ಕಪ್ ಕಿರೀಟ ಮತ್ತು ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿತು.

Ind Vs SA: ಇದು ನಾನು ನೋಡಿದ ಅತ್ಯುತ್ತಮ ಟಿ20 ಇನ್ನಿಂಗ್ಸ್ : ಗೌತಮ್ ಗಂಭೀರ್Ind Vs SA: ಇದು ನಾನು ನೋಡಿದ ಅತ್ಯುತ್ತಮ ಟಿ20 ಇನ್ನಿಂಗ್ಸ್ : ಗೌತಮ್ ಗಂಭೀರ್

2019 ರ ಥೈಲ್ಯಾಂಡ್ ಓಪನ್ ಸೂಪರ್ 500 ಮತ್ತು ಈ ವರ್ಷ ಇಂಡಿಯಾ ಓಪನ್ ಸೂಪರ್ 500 ನಂತರ ಇದು ಜೋಡಿಯ ಮೂರನೇ ಪ್ರಶಸ್ತಿಯಾಗಿದೆ. ಸೂಪರ್ 750 ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯ ಜೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Shuttlers Satwiksairaj And Chirag Won French Open Super 750 Mens Double

ಸಾತ್ವಿಕ್ ಮತ್ತು ಚಿರಾಗ್ ಆಕ್ರಮಣಕಾರಿ ಆಟ

ಎರಡು ಆಕ್ರಮಣಕಾರಿ ತಂಡಗಳ ನಡುವಿನ ಕದನದಲ್ಲಿ, ಸಾತ್ವಿಕ್ ಮತ್ತು ಚಿರಾಗ್ ಅವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾದ ತಂತ್ರ ಕುಶಾಗ್ರಮತಿ ತೋರಿಸಿದ್ದರಿಂದ ಸುಲಭವಾಗಿ ಜಯ ಗಳಿಸಿದರು.

ಭಾರತದ ಜೋಡಿಯು ಎಲ್ಲಾಆರಂಭದಲ್ಲೇ 5-0 ಮುನ್ನಡೆ ಪಡೆದುಕೊಂಡಿತು. ಅವರು ತಮ್ಮ ಎದುರಾಳಿಗೆ ಪುನರಾಗಮನ ಮಾಡಲು ಯಾವುದೇ ಅವಕಾಶವನ್ನು ನೀಡದೆ ಪಾಯಿಂಟ್‌ಗಳ ಅಂತರವನ್ನು ಹೆಚ್ಚಿಸುತ್ತಾ ಹೋದರು.

ತೈಪೆ ಜೋಡಿಗೆ ಎರಡನೇ ಗೇಮ್‌ನಲ್ಲಿ ಉತ್ತಮ ಆರಂಭದ ಅಗತ್ಯವಿತ್ತು ಮತ್ತು ಅವರು ಆರಂಭದಲ್ಲಿ ಸ್ಪರ್ಧಾತ್ಮಕವಾಗಿ ಕಂಡುಬಂದರು, ಆದರೆ ಭಾರತದ ಜೋಡಿ ಮತ್ತೊಮ್ಮೆ ಮಧ್ಯಂತರದಲ್ಲಿ ಆರು-ಪಾಯಿಂಟ್‌ಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು.

ಆದಾಗ್ಯೂ, ಲು ಮತ್ತು ಯಾಂಗ್ ಆಟದ ಮೇಲೆ ಹಿಡಿತ ಸಾಧಿಸಲು ಪ್ರಾರಂಭಿಸಿದಾಗ, ಪಾಯಿಂಟ್‌ಗಳನ್ನು 10-12 ಕ್ಕೆ ಇಳಿಸಿದರು. ಲು ಚಿಂಗ್ ಯಾವೊ ಅವರ ತಪ್ಪಾದ ಸರ್ವ್ ಪಾಯಿಂಟ್‌ಗಳ ಓಟವನ್ನು ಮುರಿಯಿತು, ಆದರೂ, ಶೀಘ್ರದಲ್ಲೇ 14-14 ರಲ್ಲಿ ಸ್ಕೋರ್ ಸಮಬಲವಾಯಿತು. ಚಿರಾಗ್‌ನ ಒಂದೆರಡು ತಪ್ಪುಗಳು, ತಪ್ಪಾದ ಸರ್ವ್ ತೈಪೆ ಜೋಡಿಗೆ ಮುನ್ನಡೆ ಸಾಧಿಸಲು ಕಾರಣವಾಯಿತು.

ಆದರೂ, ಅಂತಿಮ ಕ್ಷಣದಲ್ಲಿ ಭಾರತದ ಜೋಡಿ ಪ್ರಬಲ ಹೋರಾಟ ನೀಡಿ 19-19ಗಳಲ್ಲಿ ಅಂಕವನ್ನು ಸಮಬಲಗೊಳಿಸಿದರು. ಸಾತ್ವಿಕ್‌ನಿಂದ ಅತ್ಯುನ್ನತ ಸ್ಮ್ಯಾಶ್‌ನೊಂದಿಗೆ ಒಂದು ಮ್ಯಾಚ್ ಪಾಯಿಂಟ್‌ಗೆ ತೆರಳಿದರು, ಅವರು ಅದನ್ನು ಮತ್ತೊಂದು ಆಕ್ರಮಣಕಾರಿ ಹೊಡೆತದೊಂದಿಗೆ ಐತಿಹಾಸಿಕ ವಿಜಯ ಸಾಧಿಸಿದರು.

Story first published: Monday, October 31, 2022, 2:30 [IST]
Other articles published on Oct 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X