All England Championships: ಮೊದಲ ಸುತ್ತಿನಲ್ಲೇ ಪಿವಿ ಸಿಂಧುಗೆ ಆಘಾತ!

ಬರ್ಮಿಂಗ್‌ಹ್ಯಾಮ್, ಮಾರ್ಚ್ 6: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಆಘಾತ ಅನುಭವಿಸಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಭಾರತದ ಬಿ. ಸಾಯ್ ಪ್ರಣೀತ್ ಮುನ್ನಡೆ ಸಾಧಿಸಿದ್ದಾರೆ.
ಬುಧವಾರ (ಮಾರ್ಚ್ 6) ಮಹಿಳಾ ವಿಭಾಗದ ಮೊದಲ ಸುತ್ತಿನ ಸಿಂಗಲ್ಸ್ ಸ್ಪರ್ಧೆಯಲ್ಲಿ ಸಿಂಧು, ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ವಿರುದ್ಧ 16-21, 22-20, 18-21ರ ಸೋಲನುಭವಿಸಿದರು. ಕಳೆದ ವರ್ಷ ಹಾಂಕಾಂಗ್ ಓಪನ್ ಬಳಿಕ ಸಿಂಧುಗೆ ಸುಂಗ್ ಜಿ ಹ್ಯುನ್ ವಿರುದ್ಧ ಲಭಿಸಿದ ಎರಡನೇ ಸೋಲಿದು.
2001ರಲ್ಲಿ ಪುಲ್ಲೇಲ ಗೋಪಿಚಂದ್ (ಸೈನಾ, ಸಿಂಧು, ಶ್ರೀಕಾಂತ್ ಅವರ ಕೋಚ್) ಆಲ್ ಇಂಗ್ಲೆಂಡ್ ಪ್ರಶಸ್ತಿ ಜಯಿಸಿದ ಬಳಿಕ ಭಾರತದ ಯಾರೊಬ್ಬರೂ ಈ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಈ ಸಿಂಧು, ಸೈನಾ ನೆಹ್ವಾಲ್, ಮತ್ತು ಕಿದಂಬಿ ಶ್ರೀಕಾಂತ್ ಮೇಲೆ ಈ ಬಾರಿ ಪ್ರಶಸ್ತಿಯ ನಿರೀಕ್ಷೆ ಇಡಲಾಗಿತ್ತು. ನಿರೀಕ್ಷೆ ಇಟ್ಟಿದ್ದವರಲ್ಲಿ ಸಿಂಧು ಹೊರ ಬಿದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications