Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತವರಿಗೆ ಸುರಕ್ಷಿತವಾಗಿ ಮರಳಿದ ಪಿವಿ ಸಿಂಧು: ಭಾವುಕ ಪೋಸ್ಟ್‌

ದುಬೈನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾರೆ. ಸಿಂಧು ಕಳೆದ ಕೆಲವು ದಿನಗಳಿಂದ ದುಬೈನಲ್ಲಿ ಸಿಲುಕಿಕೊಂಡಿದ್ದರು. ಈ ಬಗ್ಗೆ ಭಾರೀ ಸುದ್ದಿಯಾಗಿತ್ತು. ಸಿಂಧು ತವರಿಗೆ ಸುರಕ್ಷಿತವಾಗಿ ಬಂದ ಬಗ್ಗೆ ಸಿಂಧು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪಿವಿ ಸಿಂಧು ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಸುರಕ್ಷಿತವಾಗಿ ತವರಿಗೆ ಮರಳಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಿಂಧು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳು ತುಂಬಾ ಕಷ್ಟಕರ ಮತ್ತು ಅನಿಶ್ಚಿತವಾಗಿದ್ದವು. ಆದರೆ ಈಗ ನಾನು ಸುರಕ್ಷಿತವಾಗಿ ಮನೆಗೆ ಮರಳಿದ್ದೇನೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಇಸ್ರೇಲ್ ಮತ್ತು ಯುಎಸ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದಾಗ ಸಿಂಧು ಆಲ್ ಇಂಗ್ಲೆಂಡ್ ಓಪನ್ ಗಾಗಿ ಬರ್ಮಿಂಗ್ಹ್ಯಾಮ್ ಗೆ ತೆರಳುತ್ತಿದ್ದರು. ಆದರೆ ಇಸ್ರೇಲ್ ದಾಳಿಯ ಪರಿಣಾಮ ಸಿಂಧು, ಇಂಗ್ಲೆಂಡ್ ಪ್ರವಾಸವನ್ನು ಮೊಟಕುಗೊಳಿಸಿದ್ದು, ತವರಿಗೆ ಮರಳಿದ್ದಾರೆ. ಇದರಿಂದ ಸಿಂಧುಗೆ ತೀವ್ರ ನಿರಾಸೆಯಾಗಿದೆ. ಇದರಿಂದ ಸಿಂಧು ಆಲ್‌ ಇಂಗ್ಲೆಂಡ್‌ ಓಪನ್ ಗೆಲ್ಲುವ ಕನಸು ಭಗ್ನಗೊಂಡಿದೆ.

PV Sindhu

ಬೆಂಗಳೂರಿಗೆ ಬಂದು ಇಳಿಯುತ್ತಿದ್ದಂತೆ ಸಿಂಧು, ದುಬೈ ವಿಮಾನ ನಿಲ್ದಾಣದ ಸಿಬ್ಬಂದಿಗೆ ಅವರು ತಮ್ಮ ಕೃತಜ್ಞತೆಯನ್ನು ತಿಳಿಸಿದ್ದಾರೆ. ಸಿಬ್ಬಂದಿಗಳು ಕಷ್ಟಕರ ಸಮಯದಲ್ಲಿ ಉತ್ತಮವಾಗಿ ನೋಡಿಕೊಂಡರು. ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈಗ ವಿಶ್ರಾಂತಿ ಪಡೆದು ಮುಂದಿನ ಹಂತದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ರಿಯೋದಲ್ಲಿ ಬೆಳ್ಳಿ, ಟೊಕಿಯೊದಲ್ಲಿ ಕಂಚಿನ ಸಾಧನೆ ಮಾಡಿರುವ ಡಬಲ್‌ ಒಲಿಂಪಿಕ್ಸ್‌ ಪದಕ ವಿಜೇತೆ ಸಿಂಧು ಮಾರ್ಚ್ 3 ರಿಂದು ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಭಾಗವಹಿಸಲು ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣಿಸುತ್ತಿದ್ದರು. ಇರಾನ್ ಮೇಲೆ ಸತತ ಬಾಂಬ್ ದಾಳಿಗಳು ಯುಎಇಯಲ್ಲಿ ಭಯದ ವಾತಾವರಣ ಸೃಷ್ಟಿಸಿತು. ಹೀಗಾಗಿ ಸಿಂಧು ಫೆಬ್ರವರಿ 28 ರಿಂದ ದುಬೈನಲ್ಲಿ ಸಿಲುಕಿಕೊಂಡರು. ದುಬೈನಲ್ಲಿನ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.

ಲಕ್ಷ್ಯ ಸೇನ್ ಮೇಲೆ ಎಲ್ಲರ ಕಣ್ಣು

ಪಿವಿ ಸಿಂಧು ದುಬೈನಲ್ಲಿ ಸಿಲುಕಿಕೊಂಡಿದ್ದರಿಂದರಿಂದ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಲು ಆಗಿರಲಿಲ್ಲ. ಭಾರತ ಸವಾಲನ್ನು ಟೂರ್ನಿಯಲ್ಲಿ ಶಟ್ಲರ್ ಲಕ್ಷ್ಯ ಸೇನ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿವೆ. ಇವರು ಯಾವುದೇ ಪ್ರಯಾಣದ ಸಮಸ್ಯೆಗಳಿಲ್ಲದೆ ಬರ್ಮಿಂಗ್ಹ್ಯಾಮ್‌ ತಲುಪಿದ್ದಾರೆ. ಲಕ್ಷ್ಯ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಚೀನಾದ ವಿಶ್ವದ ನಂ. 1 ಶಿ ಯುಕಿಯನ್ನು ಎದುರಿಸಲಿದ್ದಾರೆ.

Story first published: Tuesday, March 3, 2026, 13:23 [IST]
Other articles published on Mar 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+