ಜಪಾನ್ ಓಪನ್: ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ಸಿಂಧು, ಸಾಯಿ ಪ್ರಣೀತ್

ಟೋಕಿಯೋ, ಜುಲೈ 25: ಟೋಕಿಯೋದಲ್ಲಿ ಗುರುವಾರ (ಜುಲೈ 25) ನಡೆದ ಜಪಾನ್ ಓಪನ್ ಬ್ಯಾಡ್ಮಿಂಟನ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಮತ್ತು ಸಾಯಿ ಪ್ರಣೀತ್ ಮುನ್ನಡೆ ಸಾಧಿಸಿದ್ದಾರೆ. ಆದರೆ ಎಚ್‌ಎಸ್ ಪ್ರಣಯ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್‌ನಲ್ಲಿ 5ನೇ ಶ್ರೇಯಾಂಕಿತೆ ಸಿಂಧು, ಮಹಿಳಾ ಸಿಂಗಲ್ಸ್‌ನಲ್ಲಿ ಶ್ರೇಯಾಂಕಿತರಲ್ಲದ ಜಪಾನ್ ಆಟಗಾರ್ತಿ ಅಯಾ ಓಹೋರಿ ಎದುರು 11-21, 21-10, 21-13ರ ಗೆಲುವು ದಾಖಲಿಸಿದರು. ಸಿಂಧು ಮೇಲುಗೈ ಸಾಧಿಸಿದ್ದೇನೋ ನಿಜ, ಆದರೆ ಎದುರಾಳಿಯೂ ಅಷ್ಟೇ ಪ್ರಬಲ ಪೈಪೋಟಿ ನೀಡಿದ್ದು ಕಾಣಿಸಿತು. ಆರಂಭಿಕ ಸೆಟ್ಟನ್ನು ಓಹೋರಿ ಜಯಿಸಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್ ಅವರು ಸ್ಥಳೀಯ ಶೆಟ್ಲರ್ ಕಂಟ ಸುನೇಯಾಮಾ ಅವರನ್ನು 21-13, 21-16ರ ನೇರ ಸೆಟ್‌ನಿಂದ ಮಣಿಸಿದರು. ಇಬ್ಬರ ಮಧ್ಯೆ 45 ನಿಮಿಷಗಳ ಕಾದಾಟ ನಡೆಯಿತು. ಭಾರತದ ಮತ್ತೊಬ್ಬ ಆಟಗಾರ ಪ್ರಣಯ್, ಡೆನ್ಮಾರ್ಕ್‌ನ ರಾಸ್ಮಸ್ ಜೆಮ್ಕೆ ಎದುರು 9-21, 15-21ರ ಹಿನ್ನಡೆ ಅನುಭವಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications