ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಗೆಲ್ಲುವತ್ತ ಸಿಂಧು, ಸೈನಾ ಚಿತ್ತ

ಒಡೆನ್ಸ್, ಅಕ್ಟೋಬರ್ 15: ಡೆನ್ಮಾರ್ಕ್ ನ ಒಡೆನ್ಸ್ ನಲ್ಲಿ ನಡೆಯಲಿರುವ 'ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್' ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವತ್ತು ಭಾರತದ ಭರವಸೆಗಳಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಚಿತ್ತ ಹರಿಸಿದ್ದಾರೆ. ಈ ಟೂರ್ನಿ ಅಕ್ಟೋಬರ್ 16ರ ಮಂಗಳವಾರದಿಂದ ಆರಂಭವಾಗಲಿದೆ.
ಟೂರ್ನಿಯ ರ್ಯಾಂಕಿಂಗ್ ನಲ್ಲಿ ವಿಶ್ವ ನಂ. 3 ಆಟಗಾರ್ತಿ ಸಿಂಧು 3ನೇ ಶ್ರೇಯಾಂಕಿತರಾಗಿದ್ದರೆ, ವಿಶ್ವ ನಂ. 11 ಆಟಗಾರ್ತಿ ಸೈನಾ, ಶ್ರೇಯಾಂಕಿತರಲ್ಲದ ಆಟಗಾರ್ತಿಯಾಗಿ ಉಳಿದುಕೊಂಡಿದ್ದಾರೆ. ಪಿವಿ ಸಿಂಧು ಮೊದಲ ಪಂದ್ಯದಲ್ಲಿ ಯುಎಸ್‌ಎಯ ಬೀವೆನ್ ಝಾಂಗ್ ಸವಾಲು ಸ್ವೀಕರಿಸಲಿದ್ದಾರೆ.
ಮತ್ತೊಬ್ಬ ಒಲಿಂಪಿಕ್ ಪದಕ ವಿಜೇತೆ ಸೈನಾ ಅವರು ಹಾಂಗ್ ಕಾಂಗ್ ನ ಚೆಯುಂಗ್ ನೈಗನ್ ಯಿ ವಿರುದ್ಧ ಮೊದಲ ಪಂದ್ಯವನ್ನಾಡಲಿದ್ದಾರೆ. ಪುರುಷರ ವಿಭಾಗದ ಪ್ರತಿಭಾನ್ವಿತ ಆಟಗಾರ, ವಿಶ್ವ ನಂ. 6ರ ಕಿದಂಬಿ ಶ್ರೀಕಾಂತ್ ಡೆನ್ಮಾರ್ಕ್ ನ ಹ್ಯಾನ್ಸ್-ಕ್ರಿಸ್ಟಿಯಾನ್ ಸೊಲ್ಬರ್ಗ್ ವಿಟಿಂಗಸ್ ಜೊತೆ ಮೊದಲ ಸುತ್ತಿನ ಕಾದಾಟ ನಡೆಸಲಿದ್ದಾರೆ.
Story first published: Monday, October 15, 2018, 20:16 [IST]
Other articles published on Oct 15, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications