ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ನಲ್ಲಿ ಹೊರಬಿದ್ದ ಸೈನಾ, ಸಿಂಧು, ಶ್ರೀಕಾಂತ್

ಪ್ಯಾರೀಸ್, ಅಕ್ಟೋಬರ್ 27: ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಪಿವಿ ಸಿಂಧು ಮೂವರೂ ಹೊರಬಿದ್ದಿದ್ದಾರೆ. ಇಲ್ಲಿಗೆ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಂತಾಗಿದೆ.
ಶುಕ್ರವಾರ (ಅಕ್ಟೋಬರ್ 26) ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಮೂರೂ ಭರವಸೆಯ ಆಟಗಾರರೂ ನಿರಾಸೆ ಮೂಡಿಸಿದರು. ಮೊದಲ ಪಂದ್ಯದಲ್ಲಿ ಸೈನಾ ನೆಹ್ವಾಲ್, ಚೈನೀಸ್ ತೈಪೆಯ ತೈ ಝು ಯಿಂಗ್ ವಿರುದ್ಧ 20-22, 11-21 ನೇರ ಸೆಟ್ ಸೋಲನುಭವಿಸಿದರು.
ಅನಂತರ ನಡೆದ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಶ್ರೀಕಾಂತ್ ಅವರು ಜಪಾನ್ ಆಟಗಾರ ಕೆಂಟೊ ಮೊಮೊಟಾ 16-21, 19-21 ಅಂತರದಿಂದ ಸೋತರು. ಸಿಂಗಲ್ಸ್ ವಿಭಾಗದಲ್ಲಿನ ಕೊನೆಯ ಭರವಸೆ ಸಿಂಧು ಕೂಡ ಹಿನ್ನಡೆ ಅನುಭವಿಸಿದರು. ಸಿಂಧು, ಚೀನಾ ಆಟಗಾರ್ತಿ ಹಿ ಬಿಂಗ್ಜಿಯಾವೊ ಎದುರು 13-21, 16-21 ಅಂತರದಿಂದ ಶರಣಾದರು.
ಸಿಂಗಲ್ಸ್ ವಿಭಾಗದಲ್ಲಿ ಮೂರೂ ಆಟಗಾರರ ನೇರ ಸೆಟ್ ಹಿನ್ನಡೆ ಅನುಭವಿಸಿದ್ದು, ಬೇಸರ ಮೂಡಿಸಿತು. ಮೊದಲ ಸೆಟ್ ನಲ್ಲಿ ಮುನ್ನಡೆ ಸಾಧಿಸಿದ್ದ ಸೈನಾ ಅಂತಿಮ ಕ್ಷಣದಲ್ಲಿ ಎದುರಾಳಿಗೆ ಅಂಕ ನೀಡಿ ಗೆಲ್ಲುವ ಸೆಟ್ಟನ್ನು ಕೈ ಚೆಲ್ಲಿದ್ದರು. ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್ ಸಾಯ್‌ರಾಜ್ ರಾಮ್‌ಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ ಗೆ ಪ್ರವೇಶಿಸಿದೆ. ಸದ್ಯಕ್ಕೆ ಫ್ರೆಂಚ್ ಓಪನ್ ನಲ್ಲಿ ಇದೊಂದೆ ಭಾರತಕ್ಕೆ ನಿಟ್ಟುಸಿರಿನ ಸಂಗತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications