ಬಿಡಬ್ಲ್ಯುಎಫ್ ರ‍್ಯಾಂಕಿಂಗ್: 8ಕ್ಕೆ ಜಾರಿದ ಶ್ರೀಕಾಂತ್, 22 ಸ್ಥಾನ ಜಿಗಿದ ಹರ್ಶೀಲ್

ಹೊಸದಿಲ್ಲಿ, ಏಪ್ರಿಲ್ 16: ವಿಶ್ವದ ಮಾಜಿ ನಂ.1 ಆಟಗಾರ ಭಾರತದ ಕಿಡಂಬಿ ಶ್ರೀಕಾಂತ್ ಬಿಡಬ್ಲ್ಯುಎಫ್ ನೂತನವಾಗಿ ಪ್ರಕಟಿಸಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಾರಿದರೆ, ಯುವ ಪ್ರತಿಭೆ ಹರ್ಶೀಲ್ ದನಿ 22 ಸ್ಥಾನ ಜಿಗಿದು 89ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಡಚ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮುಂಬೈ ಮೂಲದ ಹರ್ಶೀಲ್ ದನಿ ರ‍್ಯಾಂಕಿಂಗ್ ನಲ್ಲಿ ಭಾರಿ ನೆಗೆತ ಕಂಡಿದ್ದಾರೆ. ಇನ್ನು ಕಳೆದ ವಾರ ನಡೆದ ಸಿಂಗಾಪುರ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ಸ್ ಪ್ರವೇಶಿಸಿದ ಮಾಜಿ ರಾಷ್ಟ್ರೀಯ ಚಾಂಪಿಯನ್ ಸಮೀರ್ ವರ್ಮಾ ಒಂದು ಸ್ಥಾನ ಮೇಲೇರಿ 15ನೇ ರಾಂಕ್ ಅಲಂಕರಿಸಿದ್ದಾರೆ.
ನಿವೃತ್ತಿ ಹೊಸ್ತಿಲಲ್ಲಿರುವ ಮಾಜಿ ಕಾಮನ್‌ವೆಲ್ತ್ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಕೂಡ ತಮ್ಮ ರ‍್ಯಾಂಕಿಂಗ್ ಸುಧಾರಿಸಿಕೊಂಡಿದ್ದು ಮೂರು ಸ್ಥಾನ ಮೇಲೇರಿ 39ನೇ ಸ್ಥಾನ ಪಡೆದಿದ್ದಾರೆ. ಜೂನಿಯರ್ ವಿಭಾಗದಲ್ಲಿ ಮಾಜಿ ನಂ.೧ ಆಟಗಾರ ಹಾಗೂ ಭಾರತದ ಭವಿಷ್ಯದ ತಾರೆ ಎನಿಸಿರುವ ಲಕ್ಷ್ಯ ಸೇನ್ ಕೂಡ 2 ಸ್ಥಾನ ಸುಧಾರಿಸಿ 71ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಅನುಭವಿಗಳಾದ ಬಿ ಸಾಯ್ ಪ್ರಣೀತ್ ಮತ್ತು ಎಚ್.ಎಸ್ ಪ್ರಣೋಯ್ ಕ್ರಮವಾಗಿ 20 ಮತ್ತು 21ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ತಾರೆಯರಾದ ಪಿ.ವಿ ಸಿಂಧೂ ಮತ್ತು ಸೈನಾ ನೆಹ್ವಾಲ್ ಅವರ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications