Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Swiss Open 2023: ಸ್ವಿಸ್ ಓಪನ್ 2023 ಪ್ರಶಸ್ತಿ ಗೆದ್ದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

Swiss Open Badminton: Satwik-Chirag Win Swiss Open 2023 Mens Doubles, Beat China In Final

ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾದ ರೆನ್ ಕ್ಸಿಯಾಂಗ್ ಯು ಮತ್ತು ತಾನ್ ಕಿಯಾಂಗ್ ಅವರನ್ನು 21-19, 24-22 ಸೆಟ್‌ಗಳಿಂದ ಸೋಲಿಸುವ ಮೂಲಕ ಸ್ವಿಸ್ ಓಪನ್ 2023 ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಮಾರ್ಚ್ 26, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 6ನೇ ಜೋಡಿ ಈ ಋತುವಿನಲ್ಲಿ ತಮ್ಮ ಮೊದಲ ಬಿಡಬ್ಲ್ಯೂ ಎಫ್‌ ಅನ್ನು ಗೆದ್ದುಕೊಂಡಿದೆ. ಅಲ್ಲದೆ ಸ್ವಿಸ್ ಓಪನ್ 2023 ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಪುರುಷರ ಡಬಲ್ಸ್ ಜೋಡಿಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.

2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಜೋಡಿ, ಸ್ವಿಸ್ ಓಪನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ರಕ್ಷಣಾ ವಿಭಾಗದಲ್ಲಿ ಸಾಕಷ್ಟು ಬಲದವಾಗಿದ್ದ ಜೋಡಿ, ಆಕ್ರಮಣಕಾರಿ ಆಟದ ಮೂಲಕ ವಿಶ್ವದ 21ನೇ ಶ್ರೇಯಾಂಕಿತ ಜೋಡಿ 21-19, 24-22 ಪಾಯಿಂಟ್ಸ್‌ಗಳಿಂದ 54 ನಿಮಿಷಗಳಲ್ಲಿ ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದರು. 2019 ರಲ್ಲಿ ಥಾಯ್ಲೆಂಡ್ ಓಪನ್ ಮತ್ತು 2018 ರಲ್ಲಿ ಹೈರಾಬಾದ್ ಓಪನ್ ಮತ್ತು ಫ್ರೆಂಚ್ ಓಪನ್ ಗೆದ್ದಿದ್ದ ಭಾರತದ ಈ ಜೋಡಿಗೆ ಐದನೇ ವೃತ್ತಿಜೀವನದ ವಿಶ್ವ ಪ್ರವಾಸ ಪ್ರಶಸ್ತಿಯಾಗಿದೆ.

Swiss Open Badminton: Satwik-Chirag Win Swiss Open 2023 Mens Doubles, Beat China In Final

ಆಕ್ರಮಣಕಾರಿ ಆಟವಾಡಿದ ಜೋಡಿ

ಸಾತ್ವಿಕ್ ಮತ್ತು ಚಿರಾಗ್ ಫೈನಲ್‌ನಲ್ಲಿ ನೇರ ಗೇಮ್ ಜಯ ಸಾಧಿಸಲು ಸ್ಪರ್ಧೆಯ ಉದ್ದಕ್ಕೂ ಆಕ್ರಮಣಕಾರಿ ಆಟವಾಡಿದರು. 3-1 ಮುನ್ನಡೆಯೊಂದಿಗೆ ಆಟವನ್ನು ಪ್ರಾರಂಭಿಸಿದರು, ಆದರೂ ಚೀನಾದ ಜೋಡಿ 6-6 ಅಂಕಗಳಲ್ಲಿ ಸಮಬಲ ಸಾಧಿಸಿತು. ಆದರೆ, ಅವರಿಗೆ ಮುನ್ನಡೆ ಪಡೆಯಲು ಸಾತ್ವಿಕ್ ಮತ್ತು ಚಿರಾಗ್ ಅವಕಾಶ ನೀಡಲಿಲ್ಲ.

ಮೊದಲಾರ್ಧದಲ್ಲಿ 11-8 ಮುನ್ನಡೆ ಪಡೆದುಕೊಂಡರು. ವಿರಾಮದ ನಂತರ 17-12 ಮುನ್ನಡೆ ಪಡೆದುಕೊಂಡು ಪ್ರಾಬಲ್ಯ ಮುಂದುವರೆಸಿದರು. ಈ ಹಂತದಲ್ಲಿ ಉತ್ತಮ ಆಟವಾಡಿದ ಚೀನಾದ ಜೋಡಿ 17-18ಕ್ಕೆ ಕಡಿಮೆ ಮಾಡಿದರು. ನಂತರ ಚಿರಾಗ್ ಸ್ಮ್ಯಾಶ್ ಹೊಡೆತಗಳಿಂದ ಎರಡು ಪಾಯಿಂಟ್‌ ಗಳಿಸಿಕೊಟ್ಟರು. ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತೊಂದು ಸ್ಮ್ಯಾಶ್ ಹೊಡೆಯುವ ಮೂಲಕ ಮೊದಲ ಸೆಟ್ ಗೆದ್ದರು.

Swiss Open Badminton: Satwik-Chirag Win Swiss Open 2023 Mens Doubles, Beat China In Final

ಎರಡನೇ ಗೇಮ್‌ನಲ್ಲಿ ರೋಚಕ ಹೋರಾಟ

ಎರಡನೇ ಸುತ್ತಿನ ಆರಂಭದಲ್ಲಿ ಭಾರತೀಯ ಜೋಡಿ ಹಿನ್ನಡೆ ಅನುಭವಿಸಿತು. ಎರಡೂ ತಂಡಗಳು ಗೆಲುವಿಗಾಗಿ ರೋಚಕ ಕಾದಾಟ ನಡೆಸಿದವು. ಸ್ಕೋರ್ 8-8ರ ವರೆಗೆ ಸಮವಾಗಿದ್ದವು. ನಂತರ ಚಿರಾಗ್ ಮತ್ತು ಸಾತ್ವಿಕ್ ಎರಡು ಪಾಯಿಂಟ್ ಪಡೆದು ಮುನ್ನಡೆ ಸಾಧಿಸಿದರು.

ವಿರಾಮದ ಬಳಿಕ ಚೀನಾ ಮತ್ತೆ ಹೋರಾಟ ಮಾಡುವ ಮೂಲಕ 11-11ರಲ್ಲಿ ಸ್ಕೋರ್ ಸಮವಾಯಿತು. ನಂತರ ಭಾರತ ಮುನ್ನಡೆ ಪಡೆದುಕೊಂಡಿತು, ಆದರೂ ತಿರುಗಿಬಿದ್ದ ಚೀನಾ 16-16ರಲ್ಲಿ ಮತ್ತೆ ಅಂಕಗಳನ್ನು ಸಮಬಲಗೊಳಿಸಿತು. ಆದರೆ ಭಾರತ ಮತ್ತೆ ಮುನ್ನಡೆ ಪಡೆದುಕೊಂಡಿತು.

ನಂತರ ಚೀನಿಯರು ಒಂದು ಹಂತದಲ್ಲಿ 22-21 ಅಂಕಗಳಲ್ಲಿ ಮುನ್ನಡೆ ಪಡೆದುಕೊಂಡರು. ಆದರೆ ಭಾರತ ಮತ್ತೆ ಪಾಯಿಂಟ್ ಗಳಿಸಿ 22-22 ರಲ್ಲಿ ಸಮವಾಗಿಸಿತು. ಈ ಬಾರಿ ಮತ್ತೆ ಆಕ್ರಮಣಕಾರಿ ಆಟವಾಡುವ ಮೂಲಕ ಮತ್ತೊಂದು ಅಂಕಗಳಿಸಿದ ಚಿರಾಗ್ ಮತ್ತು ಸಾತ್ವಿಕ್ ಜೋಡಿ ಗೆಲುವಿನ ನಗೆ ಬೀರಿದರು.

Story first published: Sunday, March 26, 2023, 18:56 [IST]
Other articles published on Mar 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+