Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತೈಪೆ ಓಪನ್ 2023: ಗೆಲುವಿನ ಮೂಲಕ ಅಭಿಯಾನ ಆರಂಭಿಸಿದ ಪ್ರಣಯ್, ಕಶ್ಯಪ್

ತೈಪೆ ಓಪನ್‌ನಲ್ಲಿ ಭಾರತದ ಶಟ್ಲರ್‌ಗಳಾದ ಪ್ರಣಯ್ ಹಾಗೂ ಕಶ್ಯಪ್ ಗೆಲುವಿನ ನಗೆ ಬೀರಿದ್ದಾರೆ. ಬುಧವಾರ ನಡೆದ ತೈಪೆ ಓಪನ್‌ನ ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಷಟ್ಲರ್‌ಗಳಾದ ಎಚ್‌ಎಸ್ ಪ್ರಣಯ್ ಮತ್ತು ಪರುಪಳ್ಳಿ ಕಶ್ಯಪ್ ತಮ್ಮ ಎದುರಾಳಿಗಳ ವಿರುದ್ಧ ವಿರುದ್ಧ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಹೆಚ್‌ಎಸ್ ಪ್ರಣಯ್ ಕಳೆದ ತಿಂಗಳು ಮಲೇಷ್ಯಾ ಮಾಸ್ಟರ್ಸ್ ಸೂಪರ್ 300 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಮೂಲಕ ಶ್ರೇಯಾಂಕ ಪಟ್ಟಿಯಲ್ಲಿ ಅವರು 9ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. BWF ವರ್ಲ್ಡ್ ಟೂರ್ ಸೂಪರ್ 300 ಟೂರ್ನಮೆಂಟ್‌ನ ಆರಂಭಿಕ ಸುತ್ತಿನಲ್ಲಿ ಸ್ಥಳೀಯ ಶಟ್ಲರ್ ಲಿನ್ ಯು-ಹಸಿನ್ ವಿರುದ್ಧ ಸೆಣೆಸಾಡಿದ ಪ್ರಣಯ್ 21-11 21-10 ಅಂತರದಿಂದ ಸುಲಭವಾಗಿ ಗೆಲುವು ಸಾಧಿಸಿದ್ದಾರೆ.

HS Prannoy

ಕೇವಲ 26 ನಿಮಿಷಗಳಲ್ಲಿ ಈ ಪಂದ್ಯವನ್ನು ಪ್ರಣಯ್ ಗೆದ್ದುಕೊಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಚೆನ್ ಚಿ ಟಿಂಗ್ ಮತ್ತು ಟಾಮಿ ಸುಗಿಯಾರ್ಟೊ ನಡುವಿನ ಪಂದ್ಯದಲ್ಲಿ ಗೆದ್ದ ಆಟಗಾನನನ್ನು ಪ್ರಣಯ್ ತಮ್ಮ ಮುಂದಿನ ಸುತ್ತಿನಲ್ಲಿ ಎದುರಿಲಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಪ್ರಣಯ್ ಸಾಕಷ್ಟು ಆತ್ಮವಿಶ್ವಾಸದಿಂದಿದ್ದು ಈ ಗೆಲುವಿನ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಮತ್ತೊಂದೆಡೆ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ಕಶ್ಯಪ್ ಕೂಡ ಗೆಲುವಿನ ಆರಂಭ ಪಡೆದುಕೊಂಡಿದ್ದಾರೆ. ಜರ್ಮನಿಯ ಸ್ಯಾಮ್ಯುಯೆಲ್ ಸಿಯೋ ವಿರುದ್ದ ನಡೆದ ಪಂದ್ಯದಲ್ಲಿ ಕಶ್ಯಪ್ 21-15 21-16 ಅಂಕಗಳ ನೇರ ಸೆಟ್ಗಳ ಗೆಲುವು ಸಾಧಿಸಿದ್ದಾರೆ. ಇದೀಗ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಕಶ್ಯಪ್ ಸು ಲಿಂಯಂಗ್ ಅವರನ್ನು ಎದುರಿಸಲಿದ್ದಾರೆ.

Story first published: Wednesday, June 21, 2023, 16:34 [IST]
Other articles published on Jun 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+