ತೈಪೆ ಓಪನ್ 2023: ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್‌ಗೆ ಸೋಲು: ಭಾರತೀಯರ ಹೋರಾಟ ಅಂತ್ಯ
ತೈಪೆ ಓಪನ್‌ನಲ್ಲಿ ಭಾರತದ ಶಟ್ಲರ್‌ಗಳ ಪೈಕಿ ಎಕೈಕ ಭರವಸೆಯಾಗಿ ಉಳಿದುಕೊಂಡಿದ್ದ ಹೆಚ್‌ಎಸ್ ಪ್ರಣಯ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ. ತೈಪೆ ಓಪನ್‌ನಲ್ಲಿ 3ನೇ ಶ್ರೇಯಾಂಕದ ಹೊಂದಿದ್ದ ಪ್ರಣಯ್ ಅವರ ಅಭಿಯಾನ ಶುಕ್ರವಾರ ಅಂತ್ಯಕಂಡಿದೆ. ಸ್ಟಾರ್ ಷಟ್ಲರ್ ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್‌ನಲ್ಲಿ ಎದುರಾಳೀಗೆ ಶರಣಾಗೊದ್ದಾರೆ.
ತೈಪೆಯಲ್ಲಿ ನಡೆದ ಹಾಂಗ್ ಕಾಂಗ್‌ನ 5ನೇ ಶ್ರೇಯಾಂಕದ ಶಟ್ಲರ್ ಎನ್‌ಜಿ ಕಾ ಲಾಂಗ್ ಆಂಗಸ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯ ಏಕಪಕ್ಷೀಪವಾಗಿ ಸಾಗಿದ್ದು ಪ್ರಣಯ್ ಸುಲಭ ತುತ್ತಾದರು. ನೇರ ಸೆಟ್‌ಗಳ ಅಂತರದಿಂದ ಪ್ರಣಯ್ ಎದುರಾಳಿಗೆ ಪಂದ್ಯವನ್ನು ಬಿಟ್ಟುಕೊಡುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸುವ ಕನಸು ಭಗ್ನಗೊಳಿಸಿದರು.

ಹೆಚ್‌ಎಸ್ ಪ್ರಣಯ್ ಸೂಪರ್ 300 ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಗೆಲ್ಲುವ ನೆಚ್ಚಿನ ಆಟಗಾರಾಗಿ ಕಣಕ್ಕಿಳಿದಿದ್ದರು. ಹಾಂಕ್‌ಕಾಂಗ್‌ನ ಎದುರಾಳೀ ವಿರುದ್ಧ ಹೆಡ್ ಟು ಹೆಡ್‌ನಲ್ಲಿ 6-5 ಅಂತರದಿಂದ ಮುನ್ನಡ ಸಾಧಿಸಿದ್ದ ಕಾರಣ ಗೆಲುವು ಸಾಧಿಸುವ ಭರವಸೆ ಹೊಂದಿದ್ದರು.
ಹೆಸ್‌ಎಸ್ ಪ್ರಣಯ್ ಕಳೆದ ತಿಂಗಳು ನಡೆದ ಮಲೇಷ್ಯಾ ಮಾಸ್ಟರ್ ಸೂಪರ್ 300 ಟೂರ್ನಿಯನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದರು. ಅದಾದ ಬಳಿಕ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವ ಅವರು ತಮ್ಮ ಗೆಲುವಿನ ಲಯವನ್ನು ತೈಪೆ ಓಪನ್‌ನಲ್ಲಿಯೂ ಮುಂದುವರಿದಿದ್ದಾರೆ. ಈ ಪ್ರದರ್ಶನ ಭಾರತೀಯ ಮತ್ತೊಂಚು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸುವ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಕಳೆದ ವಾರ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಭಾಗವಹಿಸಿದ್ದ ಪ್ರಣಯ್ ಸೆಮಿಫೈನಲ್‌ಗೆ ಪ್ರವೇಶಿಸಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತರು. ನಂತರ ವಿಕ್ಟರ್ ಅಕ್ಸೆಲ್ಸನ್ ಈ ಟೂರ್ನಿಯನ್ನು ಗೆದ್ದುಕೊಂಡಿದ್ದಾರೆ.
ಸದ್ಯ ತೈಪೆ ಓಪನ್‌ನಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಶಟ್ಲರ್ ಆಗಿದ್ದರು. ಕಾಮನ್‌ವೆಲ್ತ್ ಪದಕ ವಿಜೇತ ಪರುಪ್ಪಳ್ಳಿ ಕಶ್ಯಪ್ ಈ ಟೂರ್ನಿಯಲ್ಲಿ ಹಿಂದಿನ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದ್ದರು. ಸ್ಥಳೀಯ ನೆಚ್ಚಿನ ಆಟಗಾರ ಸು ಲಿ ಯಂಗ್ ವಿರುದ್ಧ 16-21, 17-21 ಅಂತರದಿಂದ ಸೋಲು ಅನುಭವಿಸಿದ್ದರು. ಮತ್ತೊಂದೆಡೆ ಮಿಶ್ರ ಡಬಲ್ಸ್‌ನಲ್ಲಿಯೂ ಸಿಕ್ಕಿ ರೆಡ್ಡಿ ಹಾಗೂ ರೋಹನ್ ಕಪೂರ್ ಜೋಡಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications