Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತೈಪೆ ಓಪನ್ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಶಟ್ಲರ್ ಹೆಚ್‌ಎಸ್ ಫ್ರಣಯ್

ತೈಪೆ ಓಪನ್‌ನಲ್ಲಿ ಭಾರತದ ಅನುಭವಿ ಶಟ್ಲರ್ ಹೆಚ್‌ಎಸ್ ಪ್ರಣಯ್ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ ಗೆದ್ದ ಹೆಸ್‌ಎಸ್ ಪ್ರಣಯ್ ಅವರು ತೈಪೆ ಓಪನ್‌ನ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಭಾರತದ ಪುರುಷರ ಸಿಂಗಲ್ಸ್ ವಿಭಾಗದ ಶಟ್ಲರ್‌ಗಳ ಪೈಕಿ ಅಗ್ರ ಶ್ರೇಯಾಂಕದ ಆಟಗಾರ ಪ್ರಣಯ್ BWF ವರ್ಲ್ಡ್ ಟೂರ್ ಸೂಪರ್ 300 ಪಂದ್ಯಾವಳಿಯಲ್ಲಿ ಮಾಜಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಸುಗಿಯಾರ್ಟೊ ಅವರನ್ನು 21-9 21-17 ಅಂತರದಿಂದ ಮಣಿಸಿದ್ದಾರೆ. 36 ನಿಮಿಷಗಳನ್ನು ಕಾಲ ನಡೆದ ಈ ಸೆಣೆಸಾಟದಲ್ಲಿ ಮೊಸಲ ಸೆಟ್‌ಅನ್ನು ಪ್ರಣಯ್ ಹೆಚ್ಚಿನ ಯಾವುದೇ ಪ್ರತಿರೋಧವಿಲ್ಲದೆ ಮಣಿಸಿದರು.

HS Prannoy win against Tommy Sugiarto

ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆದುಕೊಂಡಿರುವ ವಿಶ್ವದ ಒಂಬತ್ತನೇ ಶ್ರೇಯಾಂಕದ ಆಟಗಾರ ಪ್ರಣಯ್ ಈ ಸುತ್ತಿನಲ್ಲಿ ಹಾಂಕಾಂಗ್‌ನ ಐದನೇ ಶ್ರೇಯಾಂಕದ ಆಂಗಸ್ ಎನ್‌ಜಿ ಕಾ ಲಾಂಗ್ ಅವರನ್ನು ಎದುರಿಸಲಿದ್ದಾರೆ. ಈ ಸೆಣೆಸಾಟದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸುವತ್ತ ಹೆಚ್‌ಎಸ್ ಪ್ರಣಯ್ ಸರ್ವ ಪ್ರುಯತ್ನ ನಡೆಸಲಿದ್ದಾರೆ.

ಹೆಸ್‌ಎಸ್ ಪ್ರಣಯ್ ಕಳೆದ ತಿಂಗಳು ನಡೆದ ಮಲೇಷ್ಯಾ ಮಾಸ್ಟರ್ ಸೂಪರ್ 300 ಟೂರ್ನಿಯನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದರು. ಅದಾದ ಬಳಿಕ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವ ಅವರು ತಮ್ಮ ಗೆಲುವಿನ ಲಯವನ್ನು ತೈಪೆ ಓಪನ್‌ನಲ್ಲಿಯೂ ಮುಂದುವರಿದಿದ್ದಾರೆ. ಈ ಪ್ರದರ್ಶನ ಭಾರತೀಯ ಮತ್ತೊಂಚು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸುವ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಕಳೆದ ವಾರ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಭಾಗವಹಿಸಿದ್ದ ಪ್ರಣಯ್ ಸೆಮಿಫೈನಲ್‌ಗೆ ಪ್ರವೇಶಿಸಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತರು. ನಂತರ ವಿಕ್ಟರ್ ಅಕ್ಸೆಲ್ಸನ್ ಈ ಟೂರ್ನಿಯನ್ನು ಗೆದ್ದುಕೊಂಡಿದ್ದಾರೆ.

ಸದ್ಯ ತೈಪೆ ಓಪನ್‌ನಲ್ಲಿ ಉಳಿದುಕೊಂಡಿರುವ ಭಾರತದ ಏಕೈಕ ಶಟ್ಲರ್ ಆಗಿದ್ದಾರೆ. ಕಾಮನ್‌ವೆಲ್ತ್ ಪದಕ ವಿಜೇತ ಪರುಪ್ಪಳ್ಳಿ ಕಶ್ಯಪ್ ಈ ಟೂರ್ನಿ ಮುಂದುವರಿದಿದ್ದರು. ಆದರೆ ಸ್ಥಳೀಯ ನೆಚ್ಚಿನ ಆಟಗಾರ ಸು ಲಿ ಯಂಗ್ ವಿರುದ್ಧ 16-21, 17-21 ಅಂತರದಿಂದ ಸೋಲು ಅನುಭವಿಸಿದ್ದಾರೆ. ಇನ್ನು ಮಿಶ್ರ ಡಬಲ್ಸ್‌ನಲ್ಲಿಯೂ ಸಿಕ್ಕಿ ರೆಡ್ಡಿ ಹಾಗೂ ರೋಹನ್ ಕಪೂರ್ ಜೋಡಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ. ತೈಪೆಯ ಜೋಡಿ ಸಿಯಾಂಗ್ ಚೀ ಮತ್ತು ಲಿನ್ ಕ್ಸಿಯೋ ಮಿನ್ ವಿರುದ್ಧ 13-21, 18-21 ಅಂತರದಿಂದ ನೇರಸೆಟ್‌ಗಳ ಸೋಲು ಅನುಭವಿಸಿದ್ದಾರೆ.

Story first published: Thursday, June 22, 2023, 16:49 [IST]
Other articles published on Jun 22, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+