ಥಾಯ್ಲೆಂಡ್ ಓಪನ್ 2021: 2ನೇ ಸುತ್ತಿಗೆ ಲಗ್ಗೆಯಿಟ್ಟ ಚಿರಾಗ್-ಸಾತ್ವಿಕ್ ಜೋಡಿ, ಪರುಪಲ್ಲಿ ಕಶ್ಯಪ್ ಹೊರಕ್ಕೆ

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಜೋಡಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ರೋಚಕ ಗೆಲುವು ಸಾಧಿಸಿದ್ದಾರೆ. ಮೊದಲ ಸೆಟ್‌ಅನ್ನು ಕಳೆದುಕೊಂಡ ಬಳಿಕ ತೀತ್ರವ ಪೈಪೋಟಿಯನ್ನು ನೀಡುವ ಮೂಲಕ ಎದುರಾಳಿ ದಕ್ಷಿಣ ಕೊರೊಯಾ ಜೋಡಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು.
ದಕ್ಷಿಣ ಕೊರಿಯಾದ ಜೋಡಿಯಾದ ಕಿಮ್ ಜಿ ಜಂಗ್ ಹಾಗೂ ಲೀ ಯಂಗ್ ಡೇ ವಿರುದ್ಧ ಭಾರತೀಯ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಮೊದಲ ಸುತ್ತನ್ನು 19-21 ಅಂತರದಿಂದ ಕಳೆದುಕೊಂಡಿತ್ತು. ಆದರೆ ಎರಡನೇ ಸುತ್ತಿನಲ್ಲಿ 21-16 ಹಾಗೂ 3ನೇ ಸುತ್ತಿನಲ್ಲಿ 21-14 ಅಂಕಗಳ ಅಂತರದಿಂದ 1 ಗಂಟೆ 6 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಭರ್ಜರಿಯಾಗಿ ಗೆಲುವು ಪಡೆದುಕೊಂಡಿದೆ. ಈ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಆದರೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತೀಯ ಜೋಡಿ ನಿರಾಸೆ ಅನುಭವಿಸಿದೆ. ಎನ್. ಸಿಕ್ಕಿ ರೆಡ್ಡಿ ಹಾಗೂ ಸುಮೀತ್ ರೆಡ್ಡಿ ಜೋಡಿ ಚುಂಗ್ ಮಾನ್ ತಂಗ್ ಹಾಗೂ ಯಂತ್ ಸುಟ್ ತ್ಸೆ ವಿರುದ್ಧದ ಪಂದ್ಯದಲ್ಲಿ 20-22, ಹಾಗೂ 17- 21 ಅಂಕಗಳಿಂದ ನೇರ ಸೆಟ್‌ಗಳಿಂದ ಶರಣಾಗಿದ್ದಾರೆ.
ಭಾರತೀಯ ತಂಡದ ಮತ್ತೋರ್ವ ಖ್ಯಾತ ಶಟ್ಲರ್ ಪರುಪಲ್ಲಿ ಕಶ್ಯಪ್ ಮೊದಲ ಸಿತ್ತಿನ ಪಂದ್ಯದ ಮೂರನೇ ಸೆಟ್‌ನ ಸಂದರ್ಭದಲ್ಲಿ ನಿವೃತ್ತಿಯನ್ನು ಪಡೆದುಕೊಂಡು ಹೊರಬಿದ್ದಿದ್ದಾರೆ. ಕೆನಡಾದ ಆಂಟೊನಿ ಹೋ ಶೂ ವಿರುದ್ಧದ ಪಂದ್ಯದಲ್ಲಿ ಕಶ್ಯಪ್ ಕಣಕ್ಕಿಳಿದಿದ್ದರು.
ಹೋ ಶೂ ಮೊದಲ ಸೆಟ್‌ನಲ್ಲಿ 21-9 ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಕಶ್ಯಪ್ ಅದ್ಭುತವಾಗಿ ಕಮ್‌ಬ್ಯಾಕ್ ಮಾಡುವ ಮೂಲಕ 21-13 ಅಂತರದಿಂದ ಸೆಟ್ ಗೆದ್ದುಕೊಂಡರು. ಆದರೆ ಮೂರನೇ ಸೆಟ್‌ನಲ್ಲಿ ಕೆನಡಾದ ಆಟಗಾರ 14-8 ಅಂತರದಿಂದ ಮುನ್ನಡೆಯನ್ನು ಪಡೆದುಕೊಂಡಿದ್ದ ಸಂದರ್ಭದಲ್ಲಿ ಕಶ್ಯಪ್ ರಿಟೈರ್ಟ್ ಹರ್ಟ್ ಪಡೆಯಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಹೋ ಶೂ ಎರಡನೇ ಸುತ್ತಿಗೆ ಪ್ರವೇಶವನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ ಪರುಪಲ್ಲಿ ಕಶ್ಯಪ್ ಅವರ ನಿವೃತ್ತಿಗೆ ಕಾರಣ ಏನೆಂದು ಬಹಿರಂಗವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications