Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಥಾಯ್ಲೆಂಡ್ ಓಪನ್: ಸೆಮಿಫೈನಲ್‌ಗೆ ಪ್ರವೇಶಿಸಿದ ಲಕ್ಷ್ಯ ಸೇನ್: ಕಿರಣ್ ಜಾರ್ಜ್ ಹೋರಾಟ ಅಂತ್ಯ

ಭಾರತದ ಅಗ್ರ ಶ್ರೇಯಾಂಕದ ಶಟ್ಲರ್ ಲಕ್ಷ್ಯ ಸೇನ್ ಥಾಯ್ಲೆಂಡ್ ಓಪನ್‌ನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ. ಬ್ಯಾಂಕಾಕ್‌ನ ಇಂಡೋರ್ ಸ್ಟೇಡಿಯಂ ಹ್ಯುಮಾರ್ಕ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ವಿರುದ್ಧ ಲಕ್ಷ್ಯ ಸೇನ್ ನೇರ ಸೆಟ್‌ಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಥಾಯ್ಲೆಂಡ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಲಕ್ಷ್ಯ ಸೇನ್ ಈ ಪಂದ್ಯದಲ್ಲಿ 21-19, 21-11 ಅಂತರದಿಂದ ಲಿಯಾಂಗ್ ಜುನ್ ಹಾವೊ ವಿರುದ್ಧ ಜಯಗಳಿಸಿದ್ದಾರೆ. ಆರಂಭಿಕ ಸೆಟ್‌ನ ಮೊದಲಾರ್ಧದಲ್ಲಿ ಇಬ್ಬರು ಆಟಗಾರರು ಕೂಡ ತೀವ್ರ ಪೈಪೋಟಿಯ ಪ್ರದರ್ಶನ ನೀಡಿದರು ಕೂಡ ಕೊನೆಯ ಹಂತದಲ್ಲಿ ಲಕ್ಷ್ಯ ಸೇನ್ ಅದ್ಭುತ ಪ್ರದರ್ಶನ ನೀಡಿ ಮೊದಲ ಸೆಟ್ ತಮ್ಮದಾಗಿಸಿಕೊಂಡರು.

Thailand Open 2023: Lakshya Sen enters semifinal, Kiran George campaign ended

ಇನ್ನು ಮೊದಲ ಸೆಟ್‌ನಲ್ಲಿ ಪಡೆದ ಗೆಲುವಿನ ಲಯವನ್ನು ಮುಂದುವರಿಸಿದ ಲಕ್ಷ್ಯ ಸೇನ್ ಎರಡನೇ ಗೇಮ್‌ನಲ್ಲಿ ತಮ್ಮ ವೇಗವನ್ನು ಹೆಚ್ಚಿಸಿದರು. ಇನ್ನು ಲಿಯಾಂಗ್ ಗಾಯಗೊಂಡ ನಂತರ ಸೇನ್ ಪಂದ್ಯದಲ್ಲಿ ಮತ್ತಷ್ಟು ನಿಯಂತ್ರಣ ಸಾಧಿಸಿದರು. ಲಿಯಾಂಗ್ ವಿರಾಮದ ಸಮಯದಲ್ಲಿ ಚಿಕಿತ್ಸೆಗೆ ಒಳಗಾಗಿ ಆಟ ಪುನರಾರಂಭಗೊಂಡಾಗ ಅವರ ಸ್ಥಿತಿ ಉತ್ತಮವಾಗಿರಲಿಲ್ಲ. ಈ ಸಂದರ್ಭದಲ್ಲಿ ಸೆಮಿ-ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸೇನ್‌ಗೆ ಮೂರು ಅಂಕಗಳು ಮಾತ್ರವೇ ಅಗತ್ಯವಿತ್ತು.

ಇನ್ನು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿರುವ ಲಕ್ಷ್ಯ ಸೇನ್ ಚೀನಾದ ಐದನೇ ಶ್ರೇಯಾಂಕದ ಗುವಾಂಗ್ ಜು ಲು ಮತ್ತು ಥಾಯ್ಲೆಂಡ್‌ನ ಎರಡನೇ ಶ್ರೇಯಾಂಕದ ಕುನ್ಲವುಟ್ ವಿಟಿಡ್ಸರ್ನ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಥಾಯ್ಲೆಂಡ್ ಓಪನ್‌ನಲ್ಲಿ ಈಗ ಭಾರತದ ಭರವಸೆಯಾಗಿ ಉಳಿದುಕೊಂಡಿರುವ ಏಕೈಕ ಶಟ್ಲರ್ ಆಗಿದ್ದಾರೆ ಸೇನ್.

ಇನ್ನು ಇದಕ್ಕೂ ಮುನ್ನ ಭಾರತದ ಮತ್ತೊರ್ವ ಶಟ್ಲರ್ ಕಿರಣ್ ಜಾರ್ಜ್ ಅವರ ಅದ್ಭುತ ಅಭಿಯಾನ ಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯವಾಯಿತು. ಭಾರತದ ಆಟಗಾರನ ಹೋರಾಟ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ ವಿರುದ್ಧ ಸೋಲಿನ ಮೂಲಕ ಅಂತ್ಯಗೊಂಡಿತು.

Story first published: Friday, June 2, 2023, 17:44 [IST]
Other articles published on Jun 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+