For Quick Alerts
ALLOW NOTIFICATIONS  
For Daily Alerts

ಥಾಯ್ಲೆಂಡ್ ಓಪನ್ 2023: ಮೊದಲ ಸುತ್ತಿನಿಂದಲೇ ಹೊರಬಿದ್ದ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್

ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. 2 ಬಾರಿಯ ಒಲಂಪಿಕ್ ಪದಕ ವಿಜೇತ ಆಟಗಾರ್ತಿ ಪಿವಿ ಸಿಂಧು ವಿಶ್ವದ 15ನೇ ಶ್ರೇಯಾಂಕದ ಕೆನಡಾದ ಆಟಗಾರ್ತಿ ಮಿಚೆಲ್ ಲಿ ವಿರುದ್ಧ ಸೋತ ಮೂರು ಗೇಮ್‌ಗಳಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಕೆನಡಾದ ಆಟಗಾರ್ತಿಯ ವಿರುದ್ಧ ಸೆಣೆಸಾಡಿದ 12 ಮುಖಾಮಖಿಯಲ್ಲಿ 3ನೇ ಬಾರಿಗೆ ಸೋಲು ಕಂಡಿಂತಾಗಿದೆ.

ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್‌ನ ಸೆಮಿಫೈನಲ್‌ಗೆ ತಲುಪಿದ್ದ ಪಿವಿ ಸಿಂಧು ಇಂದಿನ ಪಂದ್ಯದ ಮೊದಲ ಸೆಟ್‌ನಲ್ಲಿ ಸುಲಭ ಸೋಲು ಅನುಭವಿಸಿರು. ಎರಡನೇ ಸೆಟ್‌ನಲ್ಲಿ ಭರ್ಜರಿಯಾಗಿ ತಿರುಗಿಬಿದ್ದ ಸಿಂಧು ನಿರ್ಣಾಯಕ ಸುತ್ತಿಗೆ ಪಂದ್ಯವನ್ನು ಕೊಂಡೊಯ್ದರು. ಆದರೆ ಮೂರನೇ ಸುತ್ತನ್ನು ಕೂಡ ಕಳೆದುಕೊಂಡ ಕಾರಣ ಆಘಾತಕಾರಿಯಾಗಿ ಅಭಿಯಾನ ಅಂತ್ಯಗೊಳಿಸಿದ್ದಾರೆ. ಈ ಪಮದ್ಯದಲ್ಲಿ 8-21 21-18 18-21 ಸಿಂದು ಶರಣಾದರು.

Thailand Open 2023: PV Sindhu and Kidambi Srikanth lost in 1st round

ಇನ್ನು ಮತ್ತೊಂದೆಡೆ ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಕೂಡ ಥಾಯ್ಲೆಂಡ್ ಓಪನ್‌ನ ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಸೋಲು ಕಂಡಿದ್ದಾರೆ. ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ 8-21, 21-16, 14-21 ಸೆಟ್‌ಗಳಿಂದ ಸೋಲು ಕಂಡಿದ್ದಾರೆ.

ಆದರೆ ಯುವ ಶಟ್ಲರ್ ಕಿರಣ್ ಜಾರ್ಜ್ ಭಾರತಕ್ಕೆ ಅಚ್ಚರಿಯ ಫಲಿತಾಂಶ ತಂದುಕೊಟ್ಟಿದ್ದಾರೆ. ಕಿರಣ್ ಜಾರ್ಜ್ ವಿಶ್ವ ನಂ. 9 ಶಟ್ಲರ್ ಚೀನಾದ ಶಿ ಯು ಕಿ ವಿರುದ್ಧ ನೇರ ಗೇಮ್ ಗೆಲುವು ಸಾಧಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. 59ನೇ ಶ್ರೇಯಾಂಕಿತ ಆಟಗಾರ ಕಿರಣ್ ಅರ್ಹತಾ ಸುತ್ತಿನಿಂದ ಮುಖ್ಯ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡರು. 2018ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಶಿ ಯುಕಿ ಅವರನ್ನು 21-18 22-20 ರಿಂದ ಸೋಲಿಸಿ ಆಘಾತ ನೀಡಿದರು.

ಇನ್ನು ಏಪ್ರಿಲ್‌ನಲ್ಲಿ ಓರ್ಲಿಯನ್ಸ್ ಮಾಸ್ಟರ್ಸ್‌ನಲ್ಲಿ ಆರಂಭಿಕ ನಿರ್ಗಮನದ ನಂತರ ಮೊದಲ ಬಾರಿಗೆ ಸ್ಪರ್ಧೆಗೆ ಮರಳಿದ ಸೈನಾ ನೆಹ್ವಾಲ್ ಭರ್ಜರಿ ಗೆಲುವಿನಿಂದಿಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಕೆನಡಾದ ವೆನ್ ಯು ಜಾಂಗ್ ಅವರನ್ನು 21-13, 21-7 ರಿಂದ ಸೋಲಿಸಿ ಸೈನಾ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮತ್ತೊಂದೆಡೆ ಅರ್ಹತಾ ಸುತ್ತಿನಿಂದ ಬಂದ ಅಶ್ಮಿತಾ ಚಾಹಿಲಾ 17-21 14-21 ಅಂತರದಿಂದ ಭಾರತೀಯರೇ ಆದ ಮಾಳವಿಕಾ ಬನ್ಸೋಡ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

Story first published: Wednesday, May 31, 2023, 21:27 [IST]
Other articles published on May 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+