ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್‌ಗೆ

ಬ್ಯಾಂಕಾಕ್: ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಮೀರ್ ವರ್ಮಾ ಮತ್ತು ಸಾತ್ವಿಕ್‌ಸಾಯ್‌ರಾಜ್ ರಾನ್ಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಮಂಗಳವಾರ (ಜನವರಿ 19) ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸಮೀರ್ ಮುನ್ನಡೆ ಸಾಧಿಸಿದ್ದಾರೆ.
ಪುರುಷರ ಸಿಂಗಲ್ಸ್ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಸಮೀರ್ ವರ್ಮಾ ಅವರು ವಿಶ್ವ ನಂ.17ನೇ ಶ್ರೇಯಾಂಕಿತ ಡೆನ್ಮಾರ್ಕ್‌ನ ರಾಸ್ಮಸ್ ಜೆಮ್ಕೆ ಅವರನ್ನು 21-12, 21-9 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಶ್ವ ನಂ.31ನೇ ಶ್ರೇಯಾಂಕಿತ ಸಮೀರ್ ಅವರು ಆರಂಭಿಕ ಸುತ್ತಿನಲ್ಲಿ 8ನೇ ಶ್ರೇಯಾಂಕಿತ ಮಲೇಶಷ್ಯಾದ ಲೀ ಝೀ ಜಿಯಾ ಅವರನ್ನು ಸೋಲಿಸಿ ಆಘಾತ ನೀಡಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಸಮೀರ್ ಅವರು 3ನೇ ಶ್ರೇಯಾಂಕಿತ ಆಟಗಾರ ಡೆನ್ಮಾರ್ಕ್‌ನ ಆಂಡರ್ಸ್ ಆಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ. 'ಪಂದ್ಯಕ್ಕೂ ಮುನ್ನ ನಾನು ತುಂಬಾ ಆತ್ಮವಿಶ್ವಾಸ ಹೊಂದಿದ್ದೇನೆ. ನಾನು ಅಭ್ಯಾಸ ಮಾಡಿ ಇಲ್ಲಿ ಬಂದಿದ್ದೇನೆ,' ಎಂದು ಸಮೀರ್ ಹೇಳಿದ್ದಾರೆ.
ಮಿಕ್ಸ್‌ಡ್ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಸಾತ್ವಿಕ್‌ಸಾಯ್‌ರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಕೂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದ ಜೋಡಿ ವಿಶ್ವ ನಂ.17ರ ಜರ್ಮನ್ ಜೋಡಿ ಮಾರ್ಕ್ ಲ್ಯಾಮ್ಸ್ಫಸ್ ಮತ್ತು ಇಸಾಬೆಲ್ ಹರ್ಟ್ರಿಕ್ ಅವರನ್ನು 22-20, 14-21, 21-16 ಅಂತರದಿಂದ ಹಿಮ್ಮೆಟ್ಟಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications