ಥಾಯ್ಲೆಂಡ್ ಓಪನ್: ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದ ಚಿರಾಗ್- ಸಾತ್ವಿಕ್ ಜೋಡಿ

ಥಾಯ್ಲೆಂಡ್ ಓಪನ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯಾಟದಲ್ಲಿ ಭಾರತದ ಪುರುಷರ ಡಬಲ್ಸ್‌ನ ತಾರಾ ಜೋಡಿಯಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದಾರೆ. ಇಂಡೋನೇಶಿಯಾದ ಮೊಹಮ್ಮದ್ ಅಹ್ಸಾನ್ ಹಾಗೂ ಹೆಂಡ್ರಾ ಸೇಟಿಯಾವನ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಜೋಡಿ ಸೋಲು ಕಂಡಿದೆ.
ಈ ಪಂದ್ಯ ಕೇವಲ 33 ನಿಮಿಷಗಳಲ್ಲಿ ಮುಕ್ತಾಯ ಕಂಡಿತು. ಅಂತಿಮ ಹಂತದಲ್ಲಿ ಭಾರತೀಯ ಜೋಡಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿತು. ಆದರೆ ಅದಾಗಲೇ ಪಂದ್ಯವನ್ನು ತನ್ನತ್ತ ಸೆಲೆದುಕೊಳ್ಳುವಲ್ಲಿ ಇಂಡೋನೇಶಿಯಾದ ಜೋಡಿ ಯಶಸ್ವಿಯಾಗಿತ್ತು.
ಪಂದ್ಯದ ಆರಂಭದಲ್ಲೂ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ದೊರೆತ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಇವರು ಯಶಸ್ವಿಯಾಗಲಿಲ್ಲ. ಎದುರಾಳಿಗಳ ಚಾಣಾಕ್ಷ ಹಾಗೂ ಶಕ್ತಿಯುತ ಹೊಡೆತಗಳಿಂದಾಗಿ ಮೊದಲ ಸುತ್ತನ್ನು 21-19 ಅಂತರದಿಂದ ಭಾರತೀಯ ಜೋಡಿ ಕಳೆದುಕೊಂಡಿತ್ತು.
ಮೊದಲ ಹಂತದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜೋಡಿಯ ವಿರುದಧ ಮೊದಲ ಸೆಟ್ ಕಳೆದುಕೊಂಡರು ಭರ್ಜರಿಯಾಗಿ ತಿರುಗಿ ಬಿದ್ದು ಚಿರಾಗ್ ಹಾಗೂ ಸಾತ್ವಿಕ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. 19-21, 21-16, 21-14 ಅಂಕಗಳಿಂದ ಆ ಪಂದ್ಯವನ್ನು ಭಾರತೀಯರು ಗೆದ್ದಿದ್ದರು. ಆದರೆ ಈ ಗೆಲುವಿನ ಲಯವನ್ನು ಎರಡನೇ ಸುತ್ತಿನಲ್ಲಿ ಮುಂದುವರಿಸಲು ವಿಫಲರಾದರು.
ಇದಕ್ಕೂ ಮುನ್ನ ಬುಧವಾರ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಎರಡನೇ ಸುತ್ತಿನಲ್ಲಿ ಸೈನಾ ನೆಹ್ವಾಲ್ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ಅವರನ್ನು ಮತ್ತು ಶ್ರೀಕಾಂತ್ ಮಲೇಶಿಯಾದ ಲೀ ಜಿ ಜಿಯಾಲ್ ಅವರನ್ನು ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications