Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಥೈಲ್ಯಾಂಡ್ ಓಪನ್: ಇಬ್ಬರು ಬೆಂಬಲ ಸಿಬ್ಬಂದಿಗೆ ಕೊರೊನಾ ಸೋಂಕು

Thailand Open: Two support personnel test positive for COVID-19

ಬ್ಯಾಂಕಾಕ್: ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೂಲಕ ಕೋವಿಡ್-19 ಸೋಂಕು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್‌) ಅನ್ನು ಕಾಡಲಾರಂಭಿಸಿದೆ. ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಗೆ ಬಂದಿದ್ದ ಜರ್ಮನಿ ಮತ್ತು ಫ್ರಾನ್ಸ್ ನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಸಾಭೀತಾಗಿದೆ.

'ಯೊನೆಕ್ಸ್ ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಿದ್ದ ಒಬ್ಬ ಜರ್ಮನ್ ಕೋಚ್ ಮತ್ತು ಫ್ರಾನ್ಸ್ ತಂಡದ ಒಬ್ಬ ಸದಸ್ಯರಿಗೆ ಕೊರೊನಾ ಸೋಂಕಿರುವುದು ಖಾತರಿಯಾಗಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಈ ಮೂಲಕ ತಿಳಿಸುತ್ತದೆ,' ಎಂದು ಬ್ಯಾಡ್ಮಿಂಟನ್ ಆಡಳಿತ ಮಂಡಳಿ ಹೇಳಿದೆ.

ಬುಧವಾರ (ಜನವರಿ 13) ನಡೆದ ಎರಡನೇ ಕೊರೊನಾವೈರಸ್ ಪರೀಕ್ಷೆಯ ವೇಳೆ ಇಬ್ಬರೂ ಸಿಬ್ಬಂದಿಗೆ ಕೊರೊನಾ ಇರುವುದು ಸಾಬೀತಾಗಿದೆ ಎಂದು ಬಿಡಬ್ಲ್ಯೂಎಫ್‌ ತಿಳಿಸಿದೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿದ್ದಾರೆ ಎಂದು ಬಿಡಬ್ಲ್ಯೂಎಫ್‌ ಮಾಹಿತಿ ನೀಡಿದೆ.

ಭಾರತೀಯ ಸ್ಪರ್ಧಿಗಳಲ್ಲಿ ಕಿದಂಬಿ ಶ್ರೀಕಾಂತ್, ಚಿರಾಗ್-ಸಾತ್ವಿಕ್ ಜೋಡಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದೆ. 2021 ಜನವರಿ 12ರಿಂದ ಆರಂಭವಾಗಿರುವ ಯೊನೆಕ್ಸ್ ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಜನವರಿ 17ರಂದು ಕೊನೆಗೊಳ್ಳಲಿದೆ.

Story first published: Wednesday, January 13, 2021, 20:43 [IST]
Other articles published on Jan 13, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+