ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವು

ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಭಾರವಾರದಂದು ನಡೆದ ಟೋಕಿಯೊ ಒಲಿಂಪಿಕ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ ಇಸ್ರೇಲ್‌ನ ಆಟಗಾರ್ತಿ ಪುಲಿಕರ್ಪೋವಾ ವಿರುದ್ಧ ಗೆಲುವನ್ನು ಸಾಧಿಸಿದ್ದರು. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭವನ್ನು ಮಾಡಿದ್ದ ಪಿವಿ ಸಿಂಧು ಇದೀಗ ತಮ್ಮ ಎರಡನೇ ಪಂದ್ಯವನ್ನು ಸಹ ಗೆಲ್ಲುವುದರ ಮೂಲಕ 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರದಂದು ನಡೆದ ಪಂದ್ಯದಲ್ಲಿ ಭಾರತದ ಪಿ ವಿ ಸಿಂಧು ಮತ್ತು ಹಾಂಗ್‌ಕಾಂಗ್‌ನ ಚ್ಯುಂಗ್ ಗಾನ್ ಯಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಮೊದಲ ಸೆಟ್‌ನಲ್ಲಿ 21-9 ಅಂತರದಲ್ಲಿ ಲೀಲಾಜಾಲವಾಗಿ ಜಯ ಸಾಧಿಸಿದ ಪಿವಿ ಸಿಂಧುಗೆ ಎರಡನೇ ಸುತ್ತಿನಲ್ಲಿ ಹಾಂಗ್‌ಕಾಂಗ್ ಆಟಗಾರ್ತಿ ದಿಟ್ಟ ಪೈಪೋಟಿ ನೀಡಿದರು. ಹಾಂಗ್‌ಕಾಂಗ್ ಆಟಗಾರ್ತಿ ತೀವ್ರ ಹೋರಾಟ ನಡೆಸಿದರೂ ಸಹ ಕೊನೆಯ ಹಂತದಲ್ಲಿ ಪಿವಿ ಸಿಂಧು ಎದುರು ತಲೆಬಾಗಬೇಕಾಯಿತು.
ಎರಡನೇ ಸೆಟ್‌ನಲ್ಲಿ ಪಿವಿ ಸಿಂಧು 21-16 ಅಂತರದಲ್ಲಿ ಗೆಲುವು ಸಾಧಿಸುವುದರ ಮೂಲಕ ಇದೀಗ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ ವಿಭಾಗದಲ್ಲಿ 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಅತ್ತ ಇದಕ್ಕೂ ಮುನ್ನ ನಡೆದ ಮಹಿಳಾ ಹಾಕಿ ಪಂದ್ಯವೊಂದರಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ವಿರುದ್ಧ ಗ್ರೇಟ್ ಬ್ರಿಟನ್ ಮಹಿಳಾ ಹಾಕಿ ತಂಡ 4-1 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಪಿವಿ ಸಿಂಧು ಮೇಲಿದೆ ಬೆಟ್ಟದಷ್ಟು ನಿರೀಕ್ಷೆ
ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಪಿವಿ ಸಿಂಧು ಮೇಲೆ ಕ್ರೀಡಾಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಭಾನುವಾರದಂದು ಇಸ್ರೇಲ್ ಮತ್ತು ಇಂದು ಹಾಂಗ್‌ಕಾಂಗ್ ಸ್ಪರ್ಧಿಗಳ ವಿರುದ್ಧ ಪಿ ವಿ ಸಿಂಧು ಆಟ ನೋಡಿದ ಮೇಲೆ ಆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗೆಲುವಿನ ಹಾದಿಯಲ್ಲಿರುವ ಪಿವಿ ಸಿಂಧು
ಈಗಾಗಲೇ ಹೇಳಿದಂತೆ ಭಾನುವಾರ ನಡೆದ ಪಂದ್ಯ ಮತ್ತು ಬುಧವಾರ ನಡೆದ ಪಂದ್ಯದಲ್ಲಿ ಪಿವಿ ಸಿಂಧು ಜಯ ಗಳಿಸಿದ್ದಾರೆ. ಆಡಿರುವ 2 ಪಂದ್ಯಗಳ ಪೈಕಿ ಎರಡರಲ್ಲಿಯೂ ಜಯ ಗಳಿಸಿರುವ ಪಿ ವಿ ಸಿಂಧು ಸದ್ಯ ಗೆಲುವಿನ ಹಾದಿಯಲ್ಲಿ ಮುಂದುವರಿದಿದ್ದಾರೆ.

ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದಿರುವ ಏಕೈಕ ಆಟಗಾರ್ತಿ ಸಿಂಧು
ಪಿವಿ ಸಿಂಧು ಮೇಲೆ ಈ ಮಟ್ಟಿಗಿನ ನಿರೀಕ್ಷೆ ಹುಟ್ಟಲು ಕಾರಣ ಆಕೆ ಮಾಡಿರುವ ದಾಖಲೆಗಳು ಮತ್ತು ಗೆದ್ದಿರುವ ಆ ಒಂದು ವಿಶೇಷ ಪದಕ. ಹೌದು 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ ವಿ ಸಿಂಧು ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿಪದಕ ಗೆದ್ದ ಮೊದಲ ಭಾರತೀಯ ಶಟ್ಲರ್ ಎಂಬ ದಾಖಲೆಯನ್ನು ಪಿವಿ ಸಿಂಧು ನಿರ್ಮಿಸಿದರು. ಹೀಗಾಗಿಯೇ ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಸಹ ಪಿವಿ ಸಿಂಧು ಬಲಿಷ್ಠ ಆಟಗಾರ್ತಿಯರ ಪಟ್ಟಿಯಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications