ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಹ್ಯಾಟ್ರಿಕ್ ಗೆಲುವು, ಕ್ವಾರ್ಟರ್ ಫೈನಲ್‌ಗೆ ಲಗ್ಗೆ!

ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಮಿಂಚುತ್ತಿದ್ದಾರೆ. ಭಾನುವಾರದಂದು ನಡೆದ ತಮ್ಮ ಮೊದಲನೇ ಪಂದ್ಯದಲ್ಲಿ ಇಸ್ರೇಲ್‌ನ ಆಟಗಾರ್ತಿ ಪೊಲಿಕರ್ಪೊವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದ ಪಿವಿ ಸಿಂಧು ಬುಧವಾರ ನಡೆದ ತಮ್ಮ ಎರಡನೇ ಪಂದ್ಯದಲ್ಲಿ ಹಾಂಗ್‌ಕಾಂಗ್ ಆಟಗಾರ್ತಿ ವಿರುದ್ಧ ಕೂಡಾ ಗೆಲುವು ಸಾಧಿಸಿದರು.
ಇನ್ನು ಗುರುವಾರದಂದು ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಟೋಕಿಯೊ ಒಲಿಂಪಿಕ್ಸ್‌ನ ತಮ್ಮ ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ದೇಶದ ಆಟಗಾರ್ತಿ ಮಿಯಾ ಬ್ಲಿಚ್ ಫೆಲ್ಡ್ಟ್ ವಿರುದ್ಧ ಸೆಣಸಾಟ ನಡೆಸಿದ್ದಾರೆ. ಸಿಂಧು ಮತ್ತು ಮಿಯಾ ನಡುವೆ ನಡೆದ ಮೊದಲನೇ ಸುತ್ತಿನಲ್ಲಿ ಪಿವಿ ಸಿಂಧು 21-15 ಅಂತರದಲ್ಲಿ ಗೆಲುವು ಸಾಧಿಸಿದರು. ಎರಡನೇ ಸುತ್ತಿನಲ್ಲಿ ಪಿವಿ ಸಿಂಧು ಮಿಯಾ ವಿರುದ್ಧ 21-13 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವುದರ ಮೂಲಕ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ 16ರ ಸುತ್ತಿನಲ್ಲಿ ಜಯಭೇರಿ ಬಾರಿಸಿ ಇದೀಗ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ದಾಖಲಿಸಿರುವ ಮೂರನೇ ಗೆಲುವು ಇದಾಗಿದ್ದು ಪದಕ ಗೆಲ್ಲುವತ್ತ ಪಿವಿ ಸಿಂಧು ದಾಪುಗಾಲಿಡುತ್ತಿದ್ದಾರೆ. ಸದ್ಯ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಪಿವಿ ಸಿಂಧು ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನವನ್ನು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಸತತ ಗೆಲುವು ದಾಖಲಿಸುತ್ತಿರುವ ಪಿವಿ ಸಿಂಧು
ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಒಟ್ಟು 3 ಪಂದ್ಯಗಳನ್ನಾಡಿದ್ದು ಮೂರರಲ್ಲಿಯೂ ಜಯ ಸಾಧಿಸುವುದರ ಮೂಲಕ ಗೆಲುವಿನ ಹಾದಿಯಲ್ಲಿ ಮುಂದುವರಿದಿದ್ದಾರೆ. ಸತತವಾಗಿ 3 ಪಂದ್ಯಗಳಲ್ಲಿ ಜಯ ಗಳಿಸಿರುವ ಪಿ ವಿ ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂಧು ಮೇಲಿದೆ ಬೆಟ್ಟದಷ್ಟು ನಿರೀಕ್ಷೆ
ಈ ಬಾರಿಯ ಒಲಿಂಪಿಕ್ಸ್ ಆರಂಭವಾದಾಗಿನಿಂದಲೂ ವಿಶ್ವಾಸದೊಂದಿಗೆ ಆಟವನ್ನು ಆಡುತ್ತಿರುವ ಪಿವಿ ಸಿಂಧು ಎಲ್ಲಿಯೂ ಎಡವದೆ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇದುವರೆಗೂ ಸತತವಾಗಿ ಗೆಲುವು ಸಾಧಿಸುತ್ತಿರುವ ಪಿವಿ ಸಿಂಧು ಆಟವನ್ನು ನೋಡಿದ ಕ್ರೀಡಾಭಿಮಾನಿಗಳು ಪಿವಿ ಸಿಂಧು ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಪಿವಿ ಸಿಂಧು ಪದಕ ಗೆಲ್ಲಲಿದ್ದಾರೆ ಎಂಬ ನಿರೀಕ್ಷೆ ಈಗ ಎಲ್ಲರಲ್ಲಿಯೂ ಮೂಡಿದೆ.

ಯಾವುದೇ ಪಂದ್ಯದಲ್ಲಿಯೂ ಪಿವಿ ಸಿಂಧುಗೆ ಇಲ್ಲ ಸೋಲು
ಮೊದಲೇ ಹೇಳಿದಂತೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಇದುವರೆಗೂ 3 ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಈ 3 ಪಂದ್ಯಗಳಲ್ಲಿಯೂ ಎದುರಾಳಿ ಆಟಗಾರ್ತಿಯರ ಮೇಲೆ ಹಿಡಿತವನ್ನು ಸಾಧಿಸಿರುವ ಪಿ ವಿ ಸಿಂಧು ಸತತವಾಗಿ ಗೆಲುವುಗಳನ್ನು ಸಾಧಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications