ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್‌ನಲ್ಲಿ ಸೋತ ಸಿಂಧು, ಪದಕ ಸಿಗುತ್ತಾ, ಇಲ್ವಾ?

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದ್ದರು. ಆರಂಭದಿಂದಲೂ ಯಾವುದೇ ಸೋಲುಗಳನ್ನು ಕಾಣದೇ ಯಶಸ್ವಿಯಾಗಿ ಪ್ರದರ್ಶನವನ್ನು ನೀಡುತ್ತಾ ಬಂದಿದ್ದ ಪಿವಿ ಸಿಂಧು ಇದೇ ಮೊದಲ ಬಾರಿಗೆ ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಸೋಲುಂಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇದುವರೆಗೂ ಯಾವುದೇ ಪಂದ್ಯವನ್ನು ಸೋಲದೆ ಗೆಲುವಿನ ಹಾದಿಯಲ್ಲಿ ಸಾಗುತ್ತಾ ಬಂದಿದ್ದ ಪಿವಿ ಸಿಂಧು ಸೆಮಿಫೈನಲ್ ಹಂತದಲ್ಲಿ ಸೋಲನುಭವಿಸಿದ್ದಾರೆ. ಸತತವಾಗಿ 4 ಪಂದ್ಯಗಳನ್ನು ಗೆಲ್ಲುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದ ಪಿವಿ ಸಿಂಧು ಸದ್ಯ ಚಿನ್ನ ಗೆಲ್ಲುವ ಆಸೆಯಿಂದ ದೂರ ಉಳಿದಿದ್ದಾರೆ.
ಚೀನಾ ದೇಶದ ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು 18-21 ಹಾಗೂ 12-21 ಸೆಟ್‌ಗಳ ಅಂತರದಲ್ಲಿ ಸೋಲುಂಡಿದ್ದಾರೆ. ಈ ಮೂಲಕ ಚಿನ್ನದ ಪದಕ ಗೆಲ್ಲುವ ರೇಸ್‌ನಿಂದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಹೊರಬಿದ್ದಿದ್ದಾರೆ. ಚಿನ್ನದ ಪದಕದ ರೇಸ್‌ನಿಂದ ಹೊರಬಿದ್ದಿರುವ ಭಾರತದ ಪಿವಿ ಸಿಂಧು ಮುಂದಿನ ಪಂದ್ಯದಲ್ಲಿ ಚೀನಾದ ಹೆ ಬಿಂಗ್ ಜಿಯಾವೊ ವಿರುದ್ಧ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ .

ಕಂಚಿನ ಪದಕಕ್ಕಾಗಿ ಸಿಂಧು ಸೆಣಸಾಟ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸತತವಾಗಿ 4 ಪಂದ್ಯಗಳನ್ನು ಗೆದ್ದು ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶ ಮಾಡಿದ್ದ ಪಿ ವಿ ಸಿಂಧು ಚೀನಾದ ತೈಪೆ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಸೋಲುವುದರ ಮೂಲಕ ಚಿನ್ನದ ಪದಕ ಗೆಲ್ಲುವ ಆಸೆಯನ್ನು ಕೈಬಿಟ್ಟಿದ್ದಾರೆ. ಭಾರತದ ಪರ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಚಿನ್ನ ಗೆಲ್ಲಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸೆಮಿಫೈನಲ್ ಹಂತದಲ್ಲಿ ಹೊರಬಿದ್ದಿರುವ ಪಿವಿ ಸಿಂಧು ಇದೀಗ ಕಂಚಿನ ಪದಕಕ್ಕೋಸ್ಕರ ಚೀನಾದ ಬ್ಯಾಡ್ಮಿಂಟನ್ ಆಟಗಾರ್ತಿ ಹೆ ಬಿಂಗ್ ಜಿಯಾವೊ ವಿರುದ್ಧ ಭಾನುವಾರ ಸೆಣಸಾಡಲಿದ್ದಾರೆ.

ಸಿಂಧು ವಿರುದ್ಧ 13-7 ಗೆಲುವಿನ ದಾಖಲೆ ಹೊಂದಿದ್ದ ತೈ ತ್ಸು ಯಿಂಗ್
ಚೀನಾದ ತೈಪೆಯ ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿಶ್ವದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ್ತಿಯರ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಿವಿ ಸಿಂಧು ಮತ್ತು ತೈ ತ್ಸು ಯಿಂಗ್ ನಡುವೆ ಇದುವರೆಗೂ ನಡೆದಿರುವ ಪಂದ್ಯಗಳ ಪೈಕಿ ತೈ ತ್ಸು ಯಿಂಗ್ 14 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಪಿವಿ ಸಿಂಧು ತೈ ತ್ಸು ಯಿಂಗ್ ವಿರುದ್ಧ 7 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಇಬ್ಬರ ಮುಖಾಮುಖಿಯ ಕಳೆದ 3 ಪಂದ್ಯಗಳಲ್ಲಿ ಸತತವಾಗಿ ತೈ ತ್ಸು ಯಿಂಗ್ ಜಯ ಸಾಧಿಸಿದ್ದರು. ಇದೀಗ ಈ ಪಂದ್ಯವನ್ನೂ ಗೆಲ್ಲುವುದರ ಮೂಲಕ ತೈ ತ್ಸು ಯಿಂಗ್ ಪಿವಿ ಸಿಂಧು ವಿರುದ್ಧ ಸತತ ನಾಲ್ಕನೇ ಪಂದ್ಯವನ್ನು ಜಯಗಳಿಸಿದಂತಾಗಿದೆ.

ಪಿವಿ ಸಿಂಧು ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಗೆದ್ದು ಬಂದ ಹಾದಿ
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲನೆಯದಾಗಿ ಇಸ್ರೇಲ್ ಆಟಗಾರ್ತಿ ಕ್ಸೆನಿಯಾ ಪೊಲಿಕರ್ಪೊವಾ ವಿರುದ್ಧ 21-7, 21-10 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದ್ದರು, ಎರಡನೇ ಪಂದ್ಯದಲ್ಲಿ ಹಾಂಗ್‌ಕಾಂಗ್ ದೇಶದ ಬ್ಯಾಡ್ಮಿಂಟನ್ ಆಟಗಾರ್ತಿ ಎನ್ ವೈ ಚೆಂಗ್ ವಿರುದ್ಧ 21-9, 21-16 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು, ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ದೇಶದ ಬ್ಯಾಡ್ಮಿಂಟನ್ ಆಟಗಾರ್ತಿ ಮಿಯಾ ಬ್ಲಿಚ್ ಫೆಲ್ಡ್ಟ್ ವಿರುದ್ಧ 21-15, 21-13 ಅಂತರದಿಂದ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಡೆದುಕೊಂಡರು. ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಜಪಾನ್ ದೇಶದ ಬ್ಯಾಡ್ಮಿಂಟನ್ ಆಟಗಾರ್ತಿ ಯಮಗುಚಿ ವಿರುದ್ಧ 21-13, 22-20 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವುದರ ಮೂಲಕ ಪಿವಿ ಸಿಂಧು ಸೆಮಿಫೈನಲ್ ಪ್ರವೇಶವನ್ನು ಪಡೆದುಕೊಂಡಿದ್ದರು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ತೈಪೆಯ ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ 18-21, 13-21 ಸೆಟ್‌ಗಳ ಅಂತರದಲ್ಲಿ ಸೋಲನ್ನುಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications