
ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ವಿಭಾಗದ ಗ್ರೂ ಪ್ ಡಿ ದ್ವಿತೀಯ ಪಂದ್ಯದಲ್ಲಿ ಭಾರತದ ಶಟ್ಲರ್ ಸಾಯ್ ಪ್ರಣೀತ್ ಅವರು ನೆದರ್ಲ್ಯಾಂಡ್ಸ್‌ನ ಮಾರ್ಕ್ ಕ್ಯಾಲ್ಜೌವ್ ಎದುರು ಶರಣಾಗಿದ್ದಾರೆ. ಬುಧವಾರ (ಜುಲೈ 28) ಮುಸಾಶಿನೋ ಫಾರೆಸ್ಟ್ ಪ್ಲಾಜಾ ಕೋರ್ಟ್ 3ನಲ್ಲಿ ಈ ಪಂದ್ಯ ನಡೆದಿತ್ತು.
ಟೋಕಿಯೋ ಒಲಿಂಪಿಕ್ಸ್ ವಿಶೇಷ ಮುಖಪುಟ: ಪ್ರಮುಖ ಸುದ್ದಿಗಳು, ವೇಳಾಪಟ್ಟಿ, ಪದಕ ಪಟ್ಟಿ ಇಲ್ಲಿದೆ
ಸಾಯ್ ಪ್ರಣೀತ್ ಅವರನ್ನು ಮಾರ್ಕ್ ಕ್ಯಾಲ್ಜೌವ್ ಅವರು 21-14, 21-14ರ ನೇರಸೆಟ್‌ನಿಂದ ಸೋಲಿಸಿದ್ದಾರೆ. ಈ ಸೋಲಿನೊಂದಿಗೆ ಪ್ರಣೀತ್ ತನ್ನ ಮುಂದಿನ ಗ್ರೂಪ್ ಹಂತದ ಪಂದ್ಯಕ್ಕೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ. ಯಾಕೆಂದರೆ ಆಡಿರುವ ಎರಡೂ ಪಂದ್ಯಗಳಲ್ಲೂ ಪ್ರಣೀತ್ ಸೋತಿದ್ದಾರೆ.
ಮೊದಲ ಸೆಟ್‌ನಲ್ಲಿ ಪ್ರಣೀತ್ ಅವರೇ ಮುನ್ನಡೆಯಲ್ಲಿದ್ದರು. ಆದರೆ ಆಟ ಮುಂದುವರೆದಂತೆ ಕ್ಯಾಲ್ಜೌವ್ ಅಂಕ ಕದಿಯುತ್ತಾ ಬಂದರು. ದ್ವಿತೀಯ ಸೆಟ್‌ನಲ್ಲೂ ಇದೇ ಮರುಕಳಿಸಿತು. ಪ್ರಣೀತ್ ಮುನ್ನಡೆಯಲ್ಲಿದ್ದರೂ ಅದನ್ನು ಫಲಿತಾಂಶದತ್ತ ತಿರುಗಿಸಿಕೊಳ್ಳುವಲ್ಲಿ ವಿಫಲರಾದರು.
ಪದಕ ಪಟ್ಟಿಯಲ್ಲೀಗ ಜಪಾನ್ ತಂಡ 13 ಬಂಗಾರದ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಚೀನಾ 12 ಬಂಗಾರದ ಪದಕಗಳನ್ನು ಗೆದ್ದಿದೆ. ಭಾರತ ಕೇವಲ 1 ಬೆಳ್ಳಿಯೊಂದಿಗೆ ಪದಕ ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿದೆ.