ಒಲಿಂಪಿಕ್ಸ್: ಯಮಗುಚಿ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ ಪಿವಿ ಸಿಂಧು!

ಟೋಕಿಯೋ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್ ಬಲಿಷ್ಠೆ ಅಕಾನೆ ಯಮಗುಚಿ ವಿರುದ್ಧ ನೇರ ಸೆಟ್ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕದ ಆಸೆ ಮೂಡಿದೆ.
ಶುಕ್ರವಾರ (ಜುಲೈ 3) ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಅವರು ಅಕಾನೆ ಯಮಗುಚಿ ವಿರುದ್ಧ 21-13, 22-20ರ ಗೆಲುವು ದಾಖಲಿಸಿದ್ದಾರೆ. ಇಬ್ಬರ ಮಧ್ಯೆ ಸುಮಾರು 56 ನಿಮಿಷಗಳ ಕದನ ನಡೆಯಿತು. ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಭಾರತಕ್ಕಿರುವ ಒಂದೇ ಒಂದು ಪದಕದ ಭರವಸೆಯೆಂದರೆ ಅದು ಪಿವಿ ಸಿಂಧು.

ಬಂಗಾರ ಗೆಲ್ಲಲು ಅವಕಾಶ
26ರ ಹರೆಯದ ಸಿಂಧು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಜಯಿಸಿದ್ದರು. ಈ ಬಾರಿಯೂ ಸಿಂಧು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಸಿಂಧುಗೆ ಪದಕ ಲಭಿಸಿದರೆ ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕ ಲಭಿಸಿದಂತಾಗುತ್ತದೆ. ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪರ್ಧಿಸಲಿರುವ ಥೈಲ್ಯಾಂಡ್‌ನ ರಾಚನೋಕ್ ಇಂತಾನಾನ್ ಮತ್ತು ಚೈನೀಸ್ ತೈಪೆಯ ತೈ ತ್ಸು ಯಿಂಗ್ ಇವರಲ್ಲಿ ಗೆದ್ದವರ ವಿರುದ್ಧ ಸಿಂಧು ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಭಾರತದ ಖಾತೆಯಲ್ಲಿ ಒಂದೇ ಬೆಳ್ಳಿ ಪದಕ
ಭಾರತಕ್ಕೆ ಈವರೆಗೆ ಬಂದಿರುವುದು ಒಂದೇ ಬೆಳ್ಳಿಯ ಪದಕ. ಅದು ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು (49 ಕೆಜಿ ವಿಭಾಗ) ಗೆದ್ದಿರುವ ಬೆಳ್ಳಿಯ ಪದಕ. ಇನ್ನು ಮಹಿಳಾ ಬಾಕ್ಸಿಂಗ್‌ನಲ್ಲೂ ಭಾರತದ ಲವ್ಲಿನಾ ಬರ್ಗಹೈನ್ ಪದಕ ಖಾತರಿಪಡಿಸಿದ್ದಾರೆ. ವಿಶ್ವ ನಂ.6ನೇ ಶ್ರೇಯಾಂಕದ ಸಿಂಧು ಜಪಾನ್‌ನ ಅಕಾನೆ ಯಮಗುಚಿ ಅವರ ವಿರುದ್ಧ ಮುಖಾಮುಖಿಯಲ್ಲಿ 11-7 ಮುಖಾಮುಖಿಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಅವರು ಯಮಗುಚಿ ಅವರನ್ನು ಕಡೇಯ ಸಾರಿ ಸೋಲಿಸಿದ್ದರು. ಗುರುವಾರದ (ಜುಲೈ 29) ಪಂದ್ಯದಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಎದುರು ನೆರ ಸೆಟ್ ಗೆಲುವು ಕಂಡಿದ್ದರು.

ಒಟ್ಟು ಮೂರು ಪದಕಗಳ ನಿರೀಕ್ಷೆ
ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಲವ್ಲಿನಾ ಬರ್ಗಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಇದರೊಂದಿಗೆ ಭಾರತಕ್ಕೆ ಒಟ್ಟು ಮೂರು ಪದಕಗಳು ಸಿಗುವುದರಲ್ಲಿವೆ. ಒಂದು ಪದಕ ಮೀರಾಬಾಯ್ ಚಾನು ವೇಟ್ ಲಿಫ್ಟಿಂಗ್‌ನಲ್ಲಿ ಗೆದ್ದಿದ್ದರೆ ಎರಡನೇ ಪದಕವನ್ನು ಬಾಕ್ಸರ್ ಲವ್ಲಿನಾ ಬರ್ಗಹೈನ್ ಅವರು ಈಗಾಗಲೇ ಖಾತರಿಪಡಿಸಿದ್ದಾರೆ. ಮೂರನೇ ಪದಕ ಸಿಂಧು ಗೆಲ್ಲುವ ನಿರೀಕ್ಷೆಯಿದೆ. ಈಗ ಪದಕ ಪಟ್ಟಿಯಲ್ಲಿ ಜಪಾನ್ 18 ಚಿನ್ನದ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಜಪಾನ್ 16 ಪದಕಗಳನ್ನು ಗೆದ್ದಿದೆ.
ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಯುನೈಟೆಡ್ ಸ್ಟೇಟ್ಸ್ ಅಫ್ ಅಮೆರಿಕಾ 14 ಚಿನ್ನದ ಪದಕಗಳನ್ನು ಗೆದ್ದಿದ್ದರೆ, 4ನೇ ಸ್ಥಾನದಲ್ಲಿರುವ ರಷ್ಯಾ ಒಲಿಂಪಿಕ್ ಕಮಿಟಿ (ಆರ್‌ಒಸಿ) 14 ಬಂಗಾರದ ಪದಕಗಳನ್ನು ಗೆದ್ದಿದೆ. ಏಕಮಾತ್ರ ಬೆಳ್ಳಿ ಪದಕ ಗೆದ್ದಿರುವ ಭಾರತ ಸದ್ಯ 49ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications