ಟೋಕಿಯೋ ಒಲಿಂಪಿಕ್ಸ್: ಮತ್ತೊಂದು ಪದಕದ ಮೇಲೆ ಕಣ್ಣಿಟ್ಟಿರುವ ಪಿವಿ ಸಿಂಧುಗೆ ಕ್ವಾರ್ಟರ್‌ಫೈನಲ್‌ನಲ್ಲಿ ಕಠಿಣ ಸವಾಲು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರವಾಗಿ ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿರುವ ಆಟಗಾರ್ತಿಯೆಂದರೆ ಅದು ಪಿವಿ ಸಿಂಧು. 2016ರಲ್ಲಿ ಬೆಳ್ಳಿ ಪದಕವನ್ನು ಗೆದ್ದು ಸಾಧನೆ ಮಾಡಿದ್ದ ಸಿಂಧು ಮೇಲೆ ಈ ಬಾರಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆಯನ್ನು ಸಿಂಧು ನಡೆಸುತ್ತಿದ್ದಾರೆ. ಆದರೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸಿಂಧುಗೆ ಆರಂಭಿಕ ಹಂತದಲ್ಲಿ ಸುಲಭ ಸವಾಲು ಎದುರಾಗಲಿದ್ದರೂ ಕ್ವಾರ್ಟರ್‌ಫೈನಲ್‌ನಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಲಿದ್ದಾರೆ.
ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆರನೇ ಶ್ರೇಯಾಂಕಿತೆಯಾಗಿ ಪಿವಿ ಸಿಂಧು ಸ್ಪರ್ಧೆಗಿಳಿಯಲಿದ್ದಾರೆ. 'ಜೆ' ಗುಂಪಿನಲ್ಲಿ ಪಿ ಸಿಂಧು ಮೊದಲ ಹಂತದ ಹೋರಾಟವನ್ನು ನಡೆಸಲಿದ್ದಾರೆ. ಆರಂಭಿಕ ಸುತ್ತಿನಲ್ಲಿ ಅವರು ಸುಲಭ ಸವಾಲನ್ನು ಎದುರಿಸಲಿದ್ದಾ. ಆದರೆ ಕ್ವಾರ್ಟರ್‌ಫೈನಲ್ ಹಂತ ಸಿಂಧು ಪಾಲಿಗೆ ಅತ್ಯಂತ ಕಠಿಣವಾಗಿರಲಿದೆ. ಈ ಹಂತದಲ್ಲಿ ಜಪಾನ್‌ನ ಆಟಗಾರ್ತಿ ಅಕಾನೆ ಯಮಗುಚಿ ಸಿಂಧುಗೆ ಎದುರಾಗುವ ಸಂಭವ ಹೆಚ್ಚಿದೆ. ಈ ಹೋರಾಟ ತೀವ್ರ ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಈ ಅಗ್ನಿ ಪರೀಕ್ಷೆಯಲ್ಲಿ ಗೆದ್ದರಷ್ಟೇ ಸಿಂಧುಗೆ ಪದಕ ಮೇಲೆ ಕಣ್ಣಿಡಲು ಸಾಧ್ಯವಾಗಲಿದೆ.
ಈ ಬಾರಿಯ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಒಟ್ಟು 16 ಗುಂಪುಗಳಿದ್ದು ಪ್ರತಿ ಗುಂಪಿನಿಂದ ಓರ್ವ ಸ್ಪರ್ಧಿ ಪ್ರಿ ಕ್ವಾರ್ಟರ್ಸ್ ಹಂತಕ್ಕೇರುತ್ತಾರೆ. ನಂತರ ನಾಕೌಟ್ ಪಂದ್ಯಗಳು ಆರಂಭವಾಗುತ್ತವೆ. ಪ್ರೀ ಕ್ವಾರ್ಟರ್ಸ್‌ನಲ್ಲಿ ಪಿವಿ ಸಿಂಧು ಡೆನ್ಮಾರ್ಕ್‌ನ ಬ್ಲೀಚ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಇದರಲ್ಲಿ ಗೆಲುವು ಸಾಧಿಸಿ ಸಿಂದು ಮುನ್ನಡೆದರೆ ಮುಂದಿನ ಸವಾಲನ್ನು ಜಪಾನ್‌ನ ಅಕಾನೆ ಯಮಗುಚಿ ಒಡ್ಡಲಿದ್ದಾರೆ. ಈ ಇಬ್ಬರು ಕೊನೆಯ ಬಾರಿಗೆ ಆಲ್ ಇಂಗ್ಲೆಂಡ್‌ನಲ್ಲಿ ಮುಖಾಮುಖಿಯಾಗಿದ್ದರು. ಇದರಲ್ಲಿ ಸಿಂಧೂ ಯಮಗುಚಿಯನ್ನು ಸೋಲಿಸಿದ್ದರು.
ಇನ್ನು ಪುರುಷರ ವಿಭಾಗದಲ್ಲಿ ಬಿ ಸಾಯಿ ಪ್ರಣೀತ್‌ಗೆ ಜಪಾನ್‌ನ ವಿಕ್ಟರ್ ಆಕ್ಸೆಲ್ಸೆನ್ ಮತ್ತು ಕೆಂಟೊ ಮೊಮೊಟಾ ಅವರಿಂದ ಭೀಕರ ಸವಾಲನ್ನು ಎದುರಾಗಲಿದೆ. 26 ವರ್ಷದ ಸಾಯಿ 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 26 ವರ್ಷಗಳ ಸುದೀರ್ಘ ಕಾಲದ ನಂತರ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಈ ಸಾಧನೆ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications