Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BWF Ranking: ನಂಬರ್-1 ಸ್ಥಾನದಿಂದ ಕೆಳಗಿಳಿದ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್ ಜೋಡಿ!

ಜೂನ್‌ 11 ಮಂಗಳವಾರ, ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (ಬಿಡಬ್ಲ್ಯುಎಫ್) ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಸ್ಟಾರ್‌ ಬ್ಯಾಡ್ಮಿಂಟನ್ ಜೋಡಿ ಸೇರಿದಂತೆ ವಿಶ್ವದ ಹಲವು ಆಟಗಾರರ ಶ್ರೇಯಾಂಕ ಅಚ್ಚರಿ ತಂದಿದೆ.

ಕಳೆದ ವಾರ ಇಂಡೋನೇಷ್ಯಾ ಓಪನ್‌ನಲ್ಲಿ ಭಾರತದ ಅಗ್ರ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ತಮ್ಮ ಪ್ರಶಸ್ತಿ ರಕ್ಷಣೆಯಿಂದ ಹಿಂದೆ ಸರಿದಿದ್ದರು.

World Badminton Federation ranking list released India star duo has lost two places

ಇದೀಗಾ ಬಿಡಬ್ಲ್ಯೂಎಫ್ ಬಿಡುಗಡೆ ಮಾಡಿರುವ ಶ್ರೇಯಾಂಕದಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಜೋಡಿ ಎರಡು ಸ್ಥಾನ ಕಳೆಗಿಳಿದಿದ್ದಾರೆ. ಅಂದರೆ ನಂಬರ್‌ 1 ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಚೀನಾದ ಲಿಯಾಂಗ್ ವೀ-ಕೆಂಗ್ ಮತ್ತು ವಾಂಗ್ ಚಾಂಗ್ ಅವರು ನೂತನ ಪುರುಷರ ಡಬಲ್ಸ್ ನಂಬರ್ ಒನ್ ಜೋಡಿ ಆಗಿದ್ದಾರೆ. ಬಳಿಕ ಡೆನ್ಮಾರ್ಕ್‌ನ ಕಿಮ್ ಆಸ್ಟ್ರಪ್ ಮತ್ತು ಆಂಡರ್ಸ್ ಸ್ಕರೂಪ್ ರಾಸ್ಮುಸ್ಸೆನ್ ಎರಡು ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ.

ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಮೇನಲ್ಲಿ ಥೈಲ್ಯಾಂಡ್ ಓಪನ್ ಗೆಲ್ಲುವ ಮೂಲಕ ನಂಬರ್ ಒನ್ ಶ್ರೇಯಾಂಕವನ್ನು ಸಾಧಿಸಿತು. ಆದರೆ ಕಳೆದ ತಿಂಗಳು ಸಿಂಗಾಪುರ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತು. ಪ್ರಸಕ್ತ ಆಸ್ಟ್ರೇಲಿಯನ್ ಓಪನ್‌ನಿಂದಲೂ ಭಾರತದ ಜೋಡಿ ಹಿಂದೆ ಸರಿದಿದೆ. ಹೀಗಾಗಿ ಶ್ರೇಯಾಂಕದಲ್ಲಿ ಬದಲಾವಣೆ ಆಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಕ್ರಮವಾಗಿ 10 ಮತ್ತು 14ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕಿಡಂಬಿ ಶ್ರೀಕಾಂತ್ ನಾಲ್ಕು ಸ್ಥಾನ ಕುಸಿದು 32ನೇ ಸ್ಥಾನ ಪಡೆದರೆ, ಪ್ರಿಯಾಂಶು ರಾಜಾವತ್ (34ನೇ) ಮತ್ತು ಕಿರಣ್ ಜಾರ್ಜ್ (ಒಂದು ಸ್ಥಾನ ಮೇಲೇರಿ 35ನೇ ಸ್ಥಾನ) ನಂತರದ ಅತ್ಯುತ್ತಮ ಭಾರತೀಯ ಆಟಗಾರರಾಗಿದ್ದಾರೆ.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದಿರುವ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಒಂದು ಸ್ಥಾನ ಮೇಲೇರಿ 19ನೇ ಸ್ಥಾನಕ್ಕೆ ತಲುಪಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಜೋಡಿ ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಕೂಡ ಒಂದು ಸ್ಥಾನ ಪಡೆದು 24ನೇ ಸ್ಥಾನದಲ್ಲಿದ್ದಾರೆ. ಇಂಡೋನೇಷ್ಯಾ ಓಪನ್‌ನ ಕೊನೆಯ-16 ರಲ್ಲಿ ನಿರ್ಗಮಿಸಿತ್ತು.

Story first published: Tuesday, June 11, 2024, 17:26 [IST]
Other articles published on Jun 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+