ಥಾಮಸ್, ಉಬರ್ ಕಪ್‌ನಿಂದ ಹಿಂದೆ ಸರಿದ ವಿಶ್ವ ಚಾಂಪಿಯನ್ ಪಿವಿ ಸಿಂಧು

ನವದೆಹಲಿ: ಡೆನ್ಮಾರ್ಕ್‌ನ ಆರ್ಹಸ್‌ನಲ್ಲಿ ಅಕ್ಟೋಬರ್ 3ರಿಂದ 11ರ ವರೆಗೆ ನಡೆಯಲಿರುವ ಥಾಮಸ್ ಮತ್ತು ಉಬರ್ ಕಪ್‌ನಿಂದ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಹಿಂದೆ ಸರಿದಿದ್ದಾರೆ. ಸುಮಾರು 6 ತಿಂಗಳ ಅಂತರದ ಬಳಿಕ ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್ ಮೂಲಕ ಅಂತಾರಾಸ್ಟ್ರೀಯ ಬ್ಯಾಡ್ಮಿಂಟನ್ ಪುನರಾರಂಭಗೊಳ್ಳಲಿದೆ.
ಅಕ್ಟೋಬರ್ 13ರಿಂದ 18ರ ವರೆಗೆ ನಡೆಯಲಿರುವ ಸೂಪರ್ 750 ಡೆನ್ಮಾರ್ಕ್ ಓಪನ್ ಟೂರ್ನಿಯಿಂದಲೂ ಸಿಂಧು ಹಿಂದೆ ಸರಿಯುವ ಸಾಧ್ಯತೆಯಿದೆ. ತನ್ನ ಕುಟುಂಬದ ಜೊತೆಗಿರಬೇಕಾಗಿರುವ ಕಾರಣ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಸಿಂಧು ತಿಳಿಸಿದ್ದಾರೆ.
ಥಾಮಸ್ ಮತ್ತು ಉಬರ್ ಕಪ್ ಫೈನಲ್ಸ್‌ನಿಂದ ಸಿಂಧು ಹಿಂದೆ ಸರಿದಿರುವುದನ್ನು ಸಿಂಧು ತಂದೆ ಪಿವಿ ರಮಣ ಹೇಳಿದ್ದಾರೆ. ಒಡೆನ್ಸ್‌ನಲ್ಲಿ ಅಕ್ಟೋಬರ್ 20ರಿಂದ 25ರ ವರೆಗೆ ನಡೆಯಲಿರುವ ಸೂಪರ್ 750 ಡೆನ್ಮಾರ್ಕ್ ಮಾಸ್ಟರ್ಸ್ ವೇಳೆಗೆ ಸಿಂಧು ಮತ್ತೆ ಟೆನಿಸ್ ಕೋರ್ಟ್‌ಗೆ ಮರಳು ನಿರೀಕ್ಷೆಯಿದೆ.
ಡೆನ್ಮಾರ್ಕ್ ಓಪನ್‌ಗೆ ಸಿಂಧು ಪ್ರವೇಶಾತಿ ಕಳುಹಿಸಿದ್ದಾರೆ. ಆದರೆ ಸಿಂಧು ಅದರಲ್ಲಿ ಭಾಗವಹಿಸೋದು ಅನುಮಾನ ಎಂದು ರಮಣ್ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications