ವರ್ಲ್ಡ್ ಚಾಂಪಿಯನ್‌ಷಿಪ್: ಬಂಗಾರ ಗೆದ್ದು ಇತಿಹಾಸ ಬರೆದ ಪಿವಿ ಸಿಂಧು

ಬಾಸೆಲ್, ಆಗಸ್ಟ್ 25: ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಭಾನುವಾರ (ಆಗಸ್ಟ್ 25) ನಡೆದ ಬಿಡಬ್ಲ್ಯೂಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಬಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಈ ಪಂದ್ಯಾಟದಲ್ಲಿ ಬಂಗಾರ ಗೆದ್ದ ಮೊದಲ ಭಾರತೀಯೆ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ.
ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್ ಬಲಿಷ್ಠೆ, ನೊಝೋಮಿ ಒಕುಹರ ವಿರುದ್ಧ 21-7, 21-7ರ ನೇರಸೆಟ್ ಗೆಲುವು ಸಾಧಿಸಿದರು. ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದ ಸಿಂಧು ಎದುರಾಳಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.
ಬಿಡಬ್ಲ್ಯೂಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಿಂಧು ಅರ್ಹತೆ ಗಿಟ್ಟಿಸಿಕೊಂಡಿದ್ದು ಇದು ಮೂರನೇ ಬಾರಿ. ಮೂರನೇ ಫೈನಲ್‌ನಲ್ಲಿ ಸಿಂಧುಗೆ ಪ್ರಶಸ್ತಿ ಲಭಿಸಿದೆ. 2018ರ ಫೈನಲ್‌ನಲ್ಲಿ ಸಿಂಧು, ಸ್ಪೇನ್ ಬಲಿಷ್ಠೆ ಕೆರೋಲಿನ ಮರಿನ್ ಎದುರು ಪರಾಭವಗೊಂಡಿದ್ದರು.
ಸೆಮಿಫೈನಲ್‌ನಲ್ಲಿ ಸಿಂಧು, ಆಲ್ ಇಂಗ್ಲೆಂಡ್ ಚಾಂಪಿಯನ್ ಚೈನೀಸ್ ಆಟಗಾರ್ತಿ ಚೆನ್ ಯು ಫೀ ಎದುರು 21-7, 21-14ರ ನೇರ ಸೆಟ್ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಅಂದ್ಹಾಗೆ ಈ ಬಾರಿ ಸಿಂಧು ವಿರುದ್ಧ ಫೈನಲ್‌ನಲ್ಲಿ ಸೋತಿರುವ ನೊಝೋಮಿ ಒಕುಹರ 2017ರಲ್ಲಿ ಇದೇ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದಿದ್ದಾಕೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications