ವಿಶ್ವ ಚಾಂಪಿಯನ್‌ಷಿಪ್: ಅಮಿತ್ ಪಂಘಲ್‌ಗೆ ಐತಿಹಾಸಿಕ ಬೆಳ್ಳಿ ಪದಕ

ಎಕಟೆರಿನ್‌ಬರ್ಗ್, ಸೆಪ್ಟೆಂಬರ್ 22: ಭಾರತದ ಬಾಕ್ಸರ್ ಅಮಿತ್ ಪಂಘಲ್ ಇತಿಹಾಸ ನಿರ್ಮಿಸಿದ್ದಾರೆ. ರಷ್ಯಾದ ಎಕಟೆರಿನ್‌ಬರ್ಗ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 21) ನಡೆದ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್‌ಗೆ ರಜತ ಪದಕ ಒಲಿದಿದೆ. ಪುರುಷರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯನಾಗಿ ಪಂಘಲ್ ಇತಿಹಾಸ ಬರೆದಿದ್ದಾರೆ.
ಪುರುಷರ 52 ಕೆಜಿ ವಿಭಾಗದ ಫೈನಲ್ ಗುದ್ದಾಟದಲ್ಲಿ ಅಮಿತ್ ಪಂಘಲ್, ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೋವ್ ಎದುರು ಸೋಲನುಭವಿಸಿದರು. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯನಾಗಿ ಅಮಿತ್ ಮಿನುಗಿದರು. ಏಷ್ಯಾನ್ ಗೇಮ್ಸ್ ಮತ್ತು ಏಷ್ಯಾನ್ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್ ದೇಶಕ್ಕೆ ಬಂಗಾರದ ಕೀರ್ತಿ ತಂದಿದ್ದರು.
ಇದೇ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಬ್ಬ ಭಾರತೀಯ ಮನೀಷ್ ಕೌಶಿಕ್ ಕೂಡ ಕಂಚು ಜಯಿಸಿ ದಾಖಲೆ ಬರೆದಿದ್ದಾರೆ. 63 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೌಶಿಕ್, ಸೆಮಿಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿ ಕಂಚಿಗೆ ತೃಪ್ತಿಪಟ್ಟಿದ್ದರು. ಆದರೆ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದ ಹಿರಿಮೆ ಮನೀಷ್ ಅವರದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications