Asian Boxing Championship: ಅಮಿತ್ ಪಂಘಲ್ ಫೈನಲ್‌ಗೆ ಪ್ರವೇಶ

ದುಬೈ: ಭಾರತದ ಪ್ರಮುಖ ಬಾಕ್ಸರ್ ಅಮಿತ್ ಪಂಘಲ್ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‌ಶಿಪ್ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದಾರೆ. 52 ಕೆಜಿ ವಿಭಾಗದಲ್ಲಿ ಹಾಲಿ ಚಾಂಪಿಯನ್ ಆಗಿರುವ ಅಮಿತ್, ಕಝಕೀಸ್ತಾನ್‌ನ ಸಕೆನ್ ಬಿಬೊಸಿನೋವ್ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ.
ಬಾಕ್ಸಿಂಗ್ ರ್‍ಯಾಂಕಿಂಗ್‌ನಲ್ಲಿ 52 ಕೆಜಿ ವಿಭಾಗದಲ್ಲಿ ಟಾಪ್‌ನಲ್ಲಿರುವ ಅಮಿತ್ ಪಂಘಲ್ ಅವರು ಶುಕ್ರವಾರ (ಮೇ 28) ನಡೆದ ಪಂದ್ಯದಲ್ಲಿ ಸಕೆನ್ ಬಿಬೊಸಿನೋವ್ ಅವರನ್ನು 5-0 ಅಂತರದಿಂದ ಸೋಲಿಸಿದರು. ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಬಿಬೊಸಿನೋವ್ ಆ ಪಂದ್ಯದಲ್ಲೂ ಸೆಮಿಫೈನಲ್‌ನಲ್ಲಿ ಪಂಘಲ್ ವಿರುದ್ಧ ಸೋತಿದ್ದರು.
ಬಾಕ್ಸಿಂಗ್ ನಲ್ಲಿ ಟಾಪ್ ಫಾರ್ಮ್‌ನಲ್ಲಿರುವ ಪಂಘಲ್, ರಕ್ಷಣೆಯಲ್ಲಿ ದುರ್ಬಲರಾಗಿದ್ದ ಬಿಬೊಸಿನೋವ್ ಎದುರು ಪ್ರಖರ ದಾಳಿ ನಡೆಸಿದರು. ವಿಶ್ವ ನಂ.1 ಶ್ರೇಯಾಂಕದ ಹರ್ಯಾಣ ಆಟಗಾರ ಪಂಘಲ್ ಕೊನೇಯ ಸುತ್ತಿನಲ್ಲಂತೂ ಆಕ್ರಮಣ ಗುದ್ದಾಟದೊಂದಿಗೆ ಎದುರಾಳಿಗೆ ಬೆದರಿಕೆಯೊಡ್ಡಿದ್ದರು.
ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೇರಿ ಕೋಮ್ (51 ಕೆಜಿ), ಲಾಲ್‌ಬುತ್ಸೈಹಿ (64 ಕೆಜಿ), ಪೂಜಾ ರಾಣಿ (75 ಕೆಜಿ), ಅನುಪಮಾ (+81 ಕೆಜಿ) ಕೂಡ ಫೈನಲ್‌ಗೆ ಪ್ರವೇಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications