Asian Boxing Championship: ಶಿವ ಥಾಪಗೆ ಸತತ 5ನೇ ಪದಕ

ದುಬೈ: ಭಾರತದ ಪ್ರಮುಖ ಬಾಕ್ಸರ್ ಶಿವ ಥಾಪ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಥಾಪ ಇದೇ ಚಾಂಪಿಯನ್‌ಶಿಪ್‌ನಲ್ಲಿ ಸತತ 5ನೇ ಪದಕ ಖಾತರಿಪಡಿಸಿದ್ದಾರೆ. ಥಾಪ ಪುರುಷರ 64ನೆ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶಿವ ಥಾಪ ಅವರು ಕುವೈತ್‌ನ ನಾಡರ್ ಒಡಾ ಅವರನ್ನು ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ. ಇದೇ ಚಾಂಪಿಯನ್‌ಶಿಪ್‌ನಲ್ಲಿ ಹಿಂದೆ 4 ಬಾರಿಯೂ ಪ್ರಶಸ್ತಿ ಗೆದ್ದಿರುವುದು ತಾಪಾರ ದಾಖಲೆಯಾಗಿದೆ.
ಸೆಮಿಫೈನಲ್‌ನಲ್ಲಿ ಥಾಪ ಹಾಲಿ ಚಾಂಪಿಯನ್ ತಜಕೀಸ್ತಾನ್‌ನ ಬಖೋದೂರ್ ಉಸ್ಮೋನೊವ್ ಟಾಪ್ ಬಾಕ್ಸರ್ ವಿರುದ್ಧ ಸೆಣಸಾಡಲಿದ್ದಾರೆ. ಉಸ್ಮೋನೊವ್ ಅವರು ಜಾನ್ ಪಾಲ್ ಪನುಯನ್ ಅವರನ್ನು ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
ಥಾಪ ಅವರು ಇದೇ ಚಾಂಪಿಯನ್‌ಶಿಪ್‌ನಲ್ಲಿ 2013ರಲ್ಲಿ ಚಿನ್ನ, 2015 ಮತ್ತು 2019ರಲ್ಲಿ ಕಂಚು, 2017ರಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
Story first published: Wednesday, May 26, 2021, 9:46 [IST]
Other articles published on May 26, 2021
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications