Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Boxing Championships: ಭಾರತಕ್ಕೆ 15 ಪದಕಗಳು ಖಾತರಿ

Asian Boxing Championships: Amit Panghal, Vikas Krishan in semis; India assured of 15 medals

ದುಬೈ: ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಮಿತ್ ಪಂಘಲ್, ವಿಕಾಸ್ ಕೃಷನ್, ವರೀಂದರ್ ಸಿಂಗ್ ಪುರುಷರ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಅಲ್ಲದೆ ಈ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆ ಭಾರತಕ್ಕೆ 15 ಪದಕಗಳು ಲಭಿಸುವುದು ಖಾತ್ರಿಯಾಗಿದೆ.

52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮಿತ್ ಪಂಘಲ್ ಅವರು ಮಂಗೋಲಿಯಾದ ಖಾರ್ಖು ಎಂಖ್ಮಂಡಖ್ ಎದುರು ಮೇಲುಗೈ ಸಾಧಿಸಿದ್ದಾರೆ. ಇನ್ನು 69 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕಾಸ್ ಕೃಷನ್ ಅವರು ಇರಾನ್‌ನ ಮೊಸ್ಲೆಮ್ ಮಾಘಸೌಡಿ ಮಾಲ್ ಅಮೀರ್ ಎದುರು ಜಯ ದಾಖಲಿಸಿದ್ದಾರೆ.

60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವರೀಂದರ್ ಸಿಂಗ್ ಅವರು ಫಿಲಿಪೈನ್‌ನ ಜೆರೆ ಸ್ಯಾಮ್ಯುಯೆಲ್ ಡೆಲಾ ಕ್ರೂಜ್ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಂಘಲ್ ಎದುರಾಳಿ ಖಾರ್ಖು ಎಂಖ್ಮಂಡಖ್ ಅವರನ್ನು 3-2 ಅಂತರದಿಂದ ಸೋಲಿಸಿದ್ದಾರೆ. ಇಬ್ಬರ ಮಧ್ಯೆ ರೋಚಕ ಗುದ್ದಾಟ ಕಾಣಿಸಿತ್ತು.

ಅಂತೂ ಈವರೆಗೆ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆ ಭಾರಕ್ಕೆ 15 ಪದಕಗಳು ಪಕ್ಕಾ ಆಗಿವೆ.

Story first published: Thursday, May 27, 2021, 0:09 [IST]
Other articles published on May 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+