ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಸೆಮಿಫೈನಲ್‌ಗೆ ಪ್ರವೇಶಿಸಿದ ಲೊವ್ಲಿನಾ, ಮೊಹಮ್ಮದ್ ಹುಸಮುದ್ದೀನ್

ಜೋರ್ಡಾನ್‌ನ ಅಮನ್‌ನಲ್ಲಿ ನಡೆಯುತ್ತಿರುವ ಎಎಸ್‌ಬಿಸಿ ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರು ಕೂಡ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಭರವಸೆ ಮೂಡಿಸಿದ್ದಾರೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳ ಪ್ರದರ್ಶನ ಗಮನಸೆಳೆದಿದೆ.
ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಮೊಹಮ್ಮದ್ ಹುಸಾಮುದ್ದೀನ್ ಅವರಿಗೆ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಹೇಂಗ್‌ಸಿಯೋಕ್ ಲೀ ಎದುರಾಗಿದ್ದರು. ಈ ಪಂದ್ಯದಲ್ಲಿಎದುರಾಳಿಯನ್ನು ಭರ್ಜರಿಯಾಗಿ ಸೋಲಿಸಿದ ಹುಸಾಮುದ್ದೀನ್ ಸೆಮಿಫಯನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಆರಂಭಿಕ ಸುತ್ತಿನಲ್ಲಿ ಹುಸಾಮುದ್ದೀನ್ ವಿರುದ್ಧ ದಕ್ಷಿಣ ಕೊರಿಯಾದ ಬಾಕ್ಸರ್ ಲ್ಯಾಂಡಿಂಗ್ ಕ್ಲೀನ್ ಪಂಚ್‌ಗಳೊಂದಿಗೆ ಮೇಲುಗೈ ಸಾಧಿಸಿದರು. ಆದರೆ ಹುಸಾಮುದ್ದೀನ್ ಮುಂದಿನ ಎರಡು ಸುತ್ತುಗಳಲ್ಲಿ 5-0 ಗೆಲುವಿನ ಹಾದಿಯಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವುಯಾದರು. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕವನ್ನು ಖಾತರಿಪಡಿಸಿದ್ದಾರೆ. 28ರ ಹರೆಯದ ಹುಸಾಮುದ್ದೀನ್ ಈಗ ನವೆಂಬರ್ 10 ರಂದು ಸೆಮಿಫೈನಲ್ ಪಂದ್ಯದಲ್ಲಿ 2021ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಸೆರಿಕ್ ಟೆಮಿರ್ಜಾ ಅವರನ್ನು ಎದುರಿಸಲಿದ್ದಾರೆ.
ಇನ್ನು ಇದಕ್ಕೂ ಮುನ್ನ ಭಾರತದ ಮಹಿಳಾ ಬಾಕ್ಸರ್ ಲೋವ್ಲಿನಾ ಬೊರ್ಗೊಹೈನ್ ಕಜಕಿಸ್ತಾನದ ವೆಲೆಂಟಿನಾ ಖಲ್ಜೋವಾ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. 2016 ರ ವಿಶ್ವ ಚಾಂಪಿಯನ್ ಖಲ್ಜೋವಾ ವಿರುದ್ಧ ಸಾಕಷ್ಟು ಪೈಪೋಟಿಯ ಪ್ರದರ್ಶನ ಏರ್ಪಟ್ಟಿತ್ತಾದರೂ ಅಂತಿಮವಾಗಿ ಭಾರತೀಯ ಆಟಗಾರ್ತಿ ಜಯ ಸಾಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications