Asian boxing Championships: ಮೇರಿ ಕೋಮ್, ಸಾಕ್ಷಿ ಫೈನಲ್‌ಗೆ ಪ್ರವೇಶ

ದುಬೈ: 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಮತ್ತು ಸಾಕ್ಷಿ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಕೊನೆಯ ನಾಲ್ಕು ಹಂತಗಳಲ್ಲಿ ಗೆಲುವುಗಳನ್ನು ಕಾಣುತ್ತ ಬಂದ ಇಬ್ಬರೂ ಗುರುವಾರ (ಮೇ 27) ಫೈನಲ್ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ ಕೋಮ್, ಸೆಮಿಫೈನಲ್ ಪಂದ್ಯದಲ್ಲಿ ಮಂಗೋಲಿಯಾದ ಲುಟ್ಸೈಖಾನ್ ಅಲ್ಟಾಂಟ್ಸೆಗ್ ವಿರುದ್ಧ 4-1ರ ಜಯ ದಾಖಲಿಸಿದರು. ಇನ್ನು 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ 2 ಬಾರಿಯ ಯೂತ್ ವರ್ಲ್ಡ್ ಚಾಂಪಿಯನ್ ಆಗಿರುವ ಸಾಕ್ಷಿ, ಕಝಕೀಸ್ತಾನದ ದೀನ ಝೋಲಮನ್ ವಿರುದ್ಧ 3-2ರ ಗೆಲುವು ಕಂಡರು.
48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೋನಿಕಾ, 57 ಕೆಜಿ ವಿಭಾಗದಲ್ಲಿ ಪಾದಾರ್ಪಣೆ ಮಾಡಿದ್ದ ಜೈಸ್ಮಿನ್ ಇಬ್ಬರೂ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಮೋನಿಕಾ ಕಝಕೀಸ್ತಾನದ ಅಲುವಾ ಬಾಲ್ಕಿಬೆಕೊವಾ ಎದುರು ಶರಣಾದರೆ, ಜೈಸ್ಮಿನ್ ಮತ್ತೊಬ್ಬ ಕಝಕೀಸ್ತಾನ್ ಆಟಗಾರ್ತಿ ವ್ಲಾಡಿಸ್ಲಾವಾ ಕುಕ್ತ ಎದುರು ಸೋತರು.
38ರ ಹರೆಯದ ಮೋರಿ ಕೋಮ್ ಫೈನಲ್‌ನಲ್ಲಿ ಕಝಕೀಸ್ತಾನದ ನಾಜಿಮ್ ಕಿಜೈಬೇ ಸವಾಲು ಸ್ವೀಕರಿಸಲಿದ್ದಾರೆ. ಈಕೆ ಎರಡು ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಂಡವರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications