Asian Boxing Championships: ಪದಕದ ಸನಿಹದಲ್ಲಿ ನಾಲ್ವರು ಭಾರತೀಯರು

ದುಬೈ: ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಸಿಮ್ರನ್‌ಜೀತ್ ಕೌರ್ ಮತ್ತು ಮೂವರು ಭಾರತೀಯ ಬಾಕ್ಸರ್‌ಗಳು ಪದಕ ಗೆಲ್ಲಲು ಒಂದೇ ಹೆಜ್ಜೆ ಹಿಂದಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ 2021ರ ಎಎಸ್‌ಬಿಸಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ನಾಲ್ವರೂ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ದುಬೈ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ 8ನೇ ಹಂತದಲ್ಲಿರುವ ಇತರ ಭಾರತೀಯ ಬಾಕ್ಸರ್‌ಗಳೆಂದರೆ ಸಾಕ್ಷಿ (54 ಕೆಜಿ ವಿಭಾಗ), ಜಾಸ್ಮಿನ್ (57 ಕೆಜಿ), ಸಂಜೀತ್ (91 ಕೆಜಿ). ಈ ಚಾಂಪಿಯನ್‌ಶಿಪ್ ಅನ್ನು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಮತ್ತು ಯುಎಇ ಬಾಕ್ಸಿಂಗ್ ಫೆಡರೇಶನ್ ಜಂಟಿಯಾಗಿ ಆಯೋಜಿಸುತ್ತಿದೆ.
60 ಕೆಜಿ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಟೋಕಿಯೋ ಒಲಿಂಪಿಕ್ಸ್ ಗೆ ಸಿದ್ಧತೆ ನಡೆಸುತ್ತಿರುವ ಬಾಕ್ಸರ್ ಸಿಮ್ರನ್‌ಜೀತ್ ಕ್ವಾರ್ಟರ್ ಫೈನಲ್ ಹಂತದಲ್ಲಿ ಉಜ್ಬೇಕಿಸ್ತಾನ್‌ನ ರೇಖೋನಾ ಕೊಡಿರೋವಾ ಸವಾಲು ಸ್ವೀಕರಿಸಲಿದ್ದಾರೆ.
ಎರಡು ಬಾರಿ ಯೂತ್ ವರ್ಲ್ಡ್ ಚಾಂಪಿಯನ್ ಸಾಕ್ಷಿ ಅವರು ತಜಕೀಸ್ತಾನ್‌ನ ರುಹಾಫ್ಜೊ ಹಕಜರೋವಾ ಅವರನ್ನು ಎದುರಿಸಲಿದ್ದಾರೆ. ಮೊಹಮ್ಮದ್ ಹುಸಾಮುದ್ದೀನ್ (56 ಕೆಜಿ), ಶಿವ ತಾಪಗೆ (64 ಕೆಜಿ) ಸೋಮವಾರ (ಮೇ 24) ರಾತ್ರಿ ಮೊದಲ ಹಂತದ ಪಂದ್ಯ ನಡೆಯಲಿದೆ. ಅಲ್ಲಿ ಗೆದ್ದರೆ ಅವರೂ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications