ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Asian Boxing Championships: ಪೂಜಾಗೆ ಚಿನ್ನ, ಮೇರಿ ಕೋಮ್‌ಗೆ ಬೆಳ್ಳಿ

Asian Boxing Championships: Pooja strikes gold; silver for Mary Kom

ದುಬೈ: ದುಬೈನನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್, ಭಾರತದ ಪೂಜಾ ರಾಣಿ (75 ಕೆಜಿ ವಿಭಾಗ) ಚಿನ್ನದ ಪದಕ ಗೆದ್ದಿದ್ದಾರೆ. ಇನ್ನು 6 ಬಾರಿಯ ವಿಶ್ವಚಾಂಪಿಯನ್‌ ಮೇರಿ ಕೋಮ್ (51 ಕೆಜಿ) ಸೇರಿ ಮೂವರು ಭಾರತೀಯ ಬಾಕ್ಸರ್‌ಗಳಿಗೆ ಬೆಳ್ಳಿಯ ಪದಕ ಲಭಿಸಿದೆ.

ಕೊಹ್ಲಿ, ವಿಲಿಯಮ್ಸನ್ ಇಬ್ಬರಲ್ಲಿ ಅತ್ಯುತ್ತಮ ಟೆಸ್ಟ್ ಆಟಗಾರ ಯಾರು ಗೊತ್ತಾ? ಅಂಕಿಅಂಶಗಳು ಹೇಳಿದ್ದಿಷ್ಟುಕೊಹ್ಲಿ, ವಿಲಿಯಮ್ಸನ್ ಇಬ್ಬರಲ್ಲಿ ಅತ್ಯುತ್ತಮ ಟೆಸ್ಟ್ ಆಟಗಾರ ಯಾರು ಗೊತ್ತಾ? ಅಂಕಿಅಂಶಗಳು ಹೇಳಿದ್ದಿಷ್ಟು

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಪೂಜಾ ರಾಣಿ ಉಜ್ಬೇಕಿಸ್ತಾನ್‌ನ ಮಾವ್ಲುಡಾ ಮೊವ್ಲೋನೋವಾ ವಿರುದ್ಧ ರೋಚಕ ಕದನದಲ್ಲಿ ಚಿನ್ನ ಗೆದ್ದರು. ಚಿನ್ನದ ಪದಕದ ಈ ಗುದ್ದಾಟಕ್ಕೆ ಪೂಜಾ 10,000 ಡಾಲರ್ (72,41,050 ರೂ.) ನಗದು ಪುರಸ್ಕಾರ ಜಯಿಸಿದ್ದಾರೆ.

ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಕಝಕೀಸ್ತಾನ್‌ನ ನಾಜಿಮ್ ಕಿಜೈಬೇ ವಿರುದ್ಧ 2-3ರ ಹಿನ್ನಡೆ ಅನುಭವಿಸಿದರು. ಆದರೆ ಮಣಿಪುರದ ಬಾಕ್ಸರ್‌ಗೆ ಇದು ವಿಶ್ವ ಮಟ್ಟದ ಟೂರ್ನಿಯಲ್ಲಿ ಲಭಿಸಿದ 7ನೇ ಪದಕವಾಗಿ ದಾಖಲೆ ನಿರ್ಮಿಸಿದೆ.

ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಡಲ್ಲ!ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಡಲ್ಲ!

ಚೊಚ್ಚಲ ಬಾರಿಗೆ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಲಾಲ್‌ಬುತ್ಸೈಹಿ (64 ಕೆಜಿ), ಕಝಕೀಸ್ತಾನ್‌ನ ಮಿಲಾನಾ ಸಫ್ರೊನೊವಾ ವಿರುದ್ಧ ಸೋತರೆ, ಅನುಪಮಾ (81+ ಕೆಜಿ) ಕಝಕೀಸ್ತಾನ್‌ನ ಲಜತ್ ಕುಂಗೀಬಾಯೇವಾ ಎದುರು ಪರಾಭವಗೊಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

Story first published: Monday, May 31, 2021, 10:01 [IST]
Other articles published on May 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X