ಏಷ್ಯನ್ ಗೇಮ್ಸ್: ಬಾಕ್ಸರ್ ವಿಕಾಸ್, ಅಮಿತ್ ಕ್ವಾರ್ಟರ್ ಫೈನಲ್ ಪ್ರವೇಶ

ಜಕಾರ್ತಾ, ಆಗಸ್ಟ್ 27: ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಬಾಕ್ಸಿಂಗ್ ನಲ್ಲಿ ಭಾರತದ ವಿಕಾಸ್ ಕೃಷ್ಣನ್ ಮತ್ತು ಅಮಿತ್ ಪಂಘಲ್ ಅವರು ಕ್ವಾರ್ಟರ್ ಫೈನಲ್ ಹಂತಕ್ಕೆ ಮುನ್ನಡೆ ಸಾಧಿಸಿದ್ದಾರೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಪುರುಷರ ಬಾಕ್ಸಿಂಗ್ 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕಾಸ್ ಮತ್ತು 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್ ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸುವ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡರು. ವಿಕಾಸ್ ಅವರು ಪಾಕಿಸ್ತಾನದ ತನ್ವೀರ್ ಅಹ್ಮದ್ ಅವರನ್ನು, ಪಂಘಲ್ ಅವರು ಮಂಗೋಲಿಯಾದ ಎನ್ಖಮಂದಖ್ ಖರ್ಹುವು ಅವರನ್ನು ಕ್ವಾರ್ಟರ್ ಫೈನಲ್ಲಿ ಹೊರಗಟ್ಟಿದರು.
ಕೃಷ್ಣನ್ ಅವರು 2010 ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ, 2014ರಲ್ಲಿ ಕಂಚಿನ ಪದಕ ಜಯಿಸಿದ್ದರಿಂದ ಈ ಬಾರಿಯೂ ಅವರಿಂದ ಪದಕ ನಿರೀಕ್ಷಿಸಬಹುದು. ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಕೃಷ್ಣನ್ ಪಾಕಿಸ್ತಾನಿ ಎದುರಾಳಿಗೆ ಭರ್ಜರಿ ಪಂಚ್ ಗಳನ್ನು ನೀಡಿ ಗಮನ ಸೆಳೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications