Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜುಲೈ-ಆಗಸ್ಟ್‌ನಲ್ಲಿ ಚೊಚ್ಚಲ ಆವೃತ್ತಿಯ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌

BFI set to launch inaugural three-week boxing league

ಹೊಸದಿಲ್ಲಿ, ಏಪ್ರಿಲ್‌ 30: ಭಾರತೀಯ ಬಾಕ್ಸಿಂಗ್‌ ಒಕ್ಕೂಟವು (ಬಿಎಫ್‌ಐ) ಮುಂಬರುವ ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ವಾರಗಳ ಕಾಲ ಚೊಚ್ಚಲ ಆವೃತ್ತಿಯ ಇಂಡಿಯನ್‌ ಬಾಕ್ಸಿಂಗ್‌ ಲೀಗ್‌ ಆಯೋಜಿಸಲು ಸಜ್ಜಾಗಿದೆ.

ಈ ಕುರಿತಾಗಿ ಬಾಕ್ಸಿಂಗ್‌ ಒಕ್ಕೂಟದ ಅಧ್ಯಕ್ಷ ಅಜಯ್‌ ಸಿಂಗ್‌ ಮತ್ತು ಲೀಗ್‌ನ ನಿರ್ದೇಶಕರಾದ ಅತುಲ್‌ ಪಾಂಡೆ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಾತ್ರಿ ಪಡಿಸಿದ್ದಾರೆ. ಅಲ್ಲದೆ ಲೀಗ್‌ನಲ್ಲಿ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಗಳು ಮತ್ತು ಭಾರತದ ಬಾಕ್ಸರ್‌ಗಳೆಲ್ಲರೂ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿ ಟೂರ್ನಿ ಅಧಿಕೃತವಾಗಿ ಘೋಷಣೆಯಾಗಲಿದೆ.

"ಬಾಕ್ಸಿಂಗ್‌ ಲೀಗ್‌ ಕೂಡ ಉಳಿದ ಕ್ರೀಡೆಯ ಲೀಗ್‌ಗಳ ಸರಣಿ ಸಾಲಿನಲ್ಲೇ ಬರಲಿದೆ,'' ಎಂದು ಅಜಯ್‌ ಸಿಂಗ್‌ ಹೇಳಿದ್ದಾರೆ. ಇದೇ ವೇಳೆ ಹೆಚ್ಚಿನ ವಿವರ ನಿಡಿದ ನಿರ್ದೇಶಕ ಪಾಂಡೆ, ಸ್ಪೋಟ್ಸ್‌ ಲೈವ್‌ ಸಂಸ್ಥೆಯು ಐಬಿಎಲ್‌ ನಡೆಯಲಿದೆ ಎಂದಿದ್ದಾರೆ.

"ಲೀಗ್‌ ಆಯೋಜನೆಗೆ ಪ್ರಾಯೋಜಕರು ಮತ್ತು ಫ್ರಾಂಚೈಸಿಗಳ ಹುಡುಕಾಟದಲ್ಲಿದ್ದೇವೆ. ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಸ್ಟಾರ್‌ ಸ್ಪೋರ್ಟ್ಸ್‌ ಎಚ್‌ಡಿ ಚಾನಲ್‌ಗಳಲ್ಲಿ ಲೀಗ್‌ ನೇರ ಪ್ರಸಾರವಾಗಲಿದ್ದು, ಜುಲೈ ಮತ್ತು ಆಗಸ್ಟ್‌ನಲ್ಲಿಸಂಜೆ 7ರಿಂದ ರಾತ್ರಿ 9ರವರೆಗೆ ಆಯೋಜಿಸಲಾಗುತ್ತದೆ,'' ಎಂದು ಪಾಂಡೆ ಹೇಳಿದ್ದಾರೆ.

"ಮುಂದಿನ 3-4 ವಾರಗಳಲ್ಲಿ ಲೀಗ್‌ ಆರಂಭದ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಚುನಾವಣೆ ಮುಗಿದ ಬಳಿಕ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ. ಲೀಗ್‌ ಆಯೋಜನೆಯ ವೇಳಾಪಟ್ಟಿಯನ್ನೂ ಘೋಷಿಸಲಾಗುವುದು,'' ಎಂದು ವಿವರಿಸಿದ್ದಾರೆ.

Story first published: Tuesday, April 30, 2019, 18:21 [IST]
Other articles published on Apr 30, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+