For Quick Alerts
ALLOW NOTIFICATIONS  
For Daily Alerts

ಯುವ ಮಹಿಳಾ ಬಾಕ್ಸರ್‌ಗೆ ಲೈಂಗಿಕ ಕಿರುಕುಳ , ಕೋಚ್ ಬಂಧನ

Boxing Coach Sandeep Malik Arrested On Charges Of Molesting Women Boxer

ನವದೆಹಲಿ, ಮಾರ್ಚ್ 18: ಬಾಕ್ಸಿಂಗ್ ಟೂರ್ನಮೆಂಟ್ ನಲ್ಲಿ ಭಾಗವಹಿಸಲು ತೆರಳುವ ವೇಳೆ 19 ವರ್ಷದ ಮಹಿಳಾ ಬಾಕ್ಸರ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಬಾಕ್ಸರ್, ಕೋಚ್ ಸಂದೀಪ್ ಮಲಿಕ್ ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.

19 ವರ್ಷ ವಯಸ್ಸಿನ ಬಾಕ್ಸರ್ ದೂರು ನೀಡಿದ್ದು, ಹರ್ಯಾಣ ಬಾಕ್ಸಿಂಗ್ ಟೀಂ ಸದಸ್ಯೆಯಾಗಿದ್ದಾರೆ. ಕೋಲ್ಕತಾದಲ್ಲಿ ಕ್ಲಾಸಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ 2020ರಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಪ್ರಯಾಣಿಸುವಾಗ 28 ವರ್ಷದ ಕೋಚ್ ಸಂದೀಪ್ ಮಲಿಕ್ ಎಂಬುವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನವದೆಹಲಿ ರೈಲ್ವೆ ಪೊಲೀಸರಲ್ಲಿ ಮೊದಲಿಗೆ ದೂರು ನೀಡಿದ್ದಾರೆ ಎಂದು ಡಿಸಿಪಿ(ರೈಲ್ವೆ) ಹರೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಮಾರ್ಚ್ ಮೊದಲ ವಾರ ಕೊಲ್ಕೊತಾದಲ್ಲಿ ಬಾಕ್ಸಿಂಗ್ ಟೂರ್ನಮೆಂಟ್ ನಡೆದಿದ್ದು, ಈ ಪಂದ್ಯಾವಳಿಗೂ ಮುನ್ನವೇ ಮಹಿಳಾ ಬಾಕ್ಸರ್ ಮೇಲೆ ಅತ್ಯಾಚಾರ ಎಸಗಲಾಗಿದೆ. ನವದೆಹಲಿಯಿಂದ ದುರಂತೋ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುವಾಗ ಕಿರುಕುಳ ನೀಡಲು ಆರಂಭಿಸಿದ ಮಲಿಕ್, ಪಂದ್ಯಾವಳಿ ಮುಗಿಯುವ ತನಕ ತನ್ನ ಕೃತ್ಯ ಮುಂದುವರೆಸಿದ್ದ ಎಂದು ನೊಂದ ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಹರ್ಯಾಣದ ಸೋನಿಪತ್ ನಲ್ಲಿ ಬಾಕ್ಸಿಂಗ್ ಅಕಾಡೆಮಿ ನಡೆಸುತ್ತಿರುವ ಆರೋಪಿ ಮಲಿಕ್ ನನ್ನು ಸೋಮವಾರದಂದು ಬಂಧಿಸಲಾಗಿದೆ. ಈತನ ವಿರುದ್ಧ ಐಪಿಸಿ ಸೆಕ್ಷನ್ 354 ಸಿ, 376 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆರೋಪಿಯು 12 ವಿದ್ಯಾರ್ಥಿಗಳ ತಂಡದೊಂದಿಗೆ ಕೊಲ್ಕೊತಾ ಟೂರ್ನಮೆಂಟ್ ಗೆ ತೆರಳಿರುವುದು ದೃಢಪಟ್ಟಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆ, ವಿಚಾರಣೆ ನಡೆಸಲಾಗಿದೆ ಎಂದು ದೆಹಲಿ ರೈಲ್ವೆ ವಿಭಾಗದ ಡಿಸಿಪಿ ಹರೇಂದ್ರ ಸಿಂಗ್ ಹೇಳಿದ್ದಾರೆ.

Story first published: Wednesday, March 18, 2020, 12:47 [IST]
Other articles published on Mar 18, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+