Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಮ್ ಮನೆಗೆ ದಿಢೀರ್ ಭೇಟಿಕೊಟ್ಟು ಅಚ್ಚರಿ ಮೂಡಿಸಿದ ದೆಹಲಿ ಪೊಲೀಸರು!

Delhi Police surprise Mary Kom with a cake on her younger son

ನವದೆಹಲಿ, ಮೇ 14: ಕೊರೊನಾವೈರಸ್‌ ಮಹಾಮಾರಿಯ ಈ ದಿನಗಳಲ್ಲಿ ಮಾನವೀಯ ಗುಣಕ್ಕಾಗಿ ಪೊಲೀಸರು ಜನರ ಮೆಚ್ಚುಗೆಗೆ ಪಾತ್ರರಾಗುತ್ತೇ ಇದ್ದಾರೆ. ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರು, ನರ್ಸ್‌ಗಳು, ಡಾಕ್ಟರ್‌ಗಳು ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದೆನಿಸಿದೆ.

ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಅವಿರತವಾಗಿ ದುಡಿಯುತ್ತಿರುವ ದೆಹಲಿ ಪೊಲೀಸರು ದಿಢೀರನೆ ಮೇರಿ ಕೋಮ್‌ ಮನೆಗೆ ಭೇಟಿಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಮನೆಗೆ ಕೇಕ್‌ನೊಂದಿಗೆ ಬಂದ ಪೊಲೀಸರು ಕೋಮ್ ಅವರ ಕಿರಿಯ ಪುತ್ರ ಪ್ರಿನ್ಸ್ ಕೋಮ್‌ನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

Delhi Police surprise Mary Kom with a cake on her younger son

ತುಘಲಕ್ ರೋಡ್‌ ಪೊಲೀಸ್ ಸಿಬ್ಬಂದಿಯ ಅಚಾನಕ್ ಭೇಟಿಯಿಂದ ಅಚ್ಚರಿ ಸಹಿತ ಖುಷಿ ತೋರಿಕೊಂಡ ಮೇರಿ ಮತ್ತವರ ಕುಟುಂಬ ಪೊಲೀಸರನ್ನು ಆದರದಿಂದ ಬರಮಾಡಿಕೊಂಡಿತು. ಅನಂತರ ಕೋಮ್ ಪುತ್ರನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಪೊಲೀಸರು ಭೇಟಿಕೊಟ್ಟು ಪುತ್ರನಿಗೆ ಹುಟ್ಟುಹಬ್ಬದ ಶುಭ ಕೋರಿದ ಖುಷಿಯನ್ನು ಮೇರಿ ಟ್ವೀಟ್ ಮೂಲಕ ತೋರಿಕೊಂಡಿದ್ದಾರೆ. 'ಪುತ್ರ ಪ್ರಿನ್ಸ್ ಕೋಮ್‌ನ ಹುಟ್ಟುಹಬ್ಬವನ್ನು ವಿಶೇಷವಾಗಿಸಿದ ದೆಹಲಿ ಪೊಲೀಸರಿಗೆ ಧನ್ಯವಾದಗಳು. ಕೊರೊನಾ ಹೋರಾಟದಲ್ಲಿನ ಮುಂಚೂಣಿ ಸೈನಿಕರು ನೀವು. ನಿಮ್ಮ ಕರ್ವವ್ಯ, ಬದ್ಧತೆಗೆ ಸೆಲ್ಯೂಟ್' ಎಂದು ಸಾಲುಗಳನ್ನು ಕೋಮ್ ಬರೆದುಕೊಂಡಿದ್ದಾರೆ.

Story first published: Thursday, May 14, 2020, 22:17 [IST]
Other articles published on May 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+