ಏಷ್ಯನ್ ಚಿನ್ನ ಗೆದ್ದ ಬಾಕ್ಸರ್ ಡಿಂಗ್ಕೊಗೆ ಕ್ಯಾನ್ಸರ್‌ ಜೊತೆಗೆ ಕೊರೊನಾ ಬರೆ!

ನವದೆಹಲಿ, ಜೂನ್ 1: ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರ ವಿಜೇತ ಬಾಕ್ಸರ್ ಡಿಂಗ್ಕೊ ಸಿಂಗ್‌ಗೆ ಮಹಾಮಾರಿ ಕ್ಯಾನ್ಸರ್ ಜೊತೆಗೆ ಕೊರೊನಾವೈರಸ್ ಆಘಾತವೂ ಎದುರಾಗಿದೆ. ಕ್ಯಾನ್ಸರ್‌ ಚಿಕಿತ್ಸೆಗಾಗಿ ಲಾಕ್‌ಡೌನ್ ಮಧ್ಯೆಯೇ ನವದೆಹಲಿಗೆ ತೆರಳಿದ್ದ ಡಿಂಗ್ಕೊಗೆ ಕೋವಿಡ್-19 ಸೋಂಕು ತಗುಲಿದೆ.

ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!

ಕೊರೊನಾವೈರಸ್ ಸೋಂಕು ತಗುಲಿರುವುದರಿಂದ ಡಿಂಗ್ಕೊ ಸಿಂಗ್ ಅವರನ್ನು ಸದ್ಯ ಇಂಪಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೆಹಲಿಯಿಂದ ಆ್ಯಂಬುಲೆನ್ಸ್‌ನಲ್ಲಿ 2 ದಿನಗಳ ಪ್ರಾಯಾಸದ ರಸ್ತೆ ಪ್ರಯಾಣದ ಬಳಿಕ ಮೇ 20ರಂದು ಡಿಂಗ್ಕೊ ಇಂಪಾಲ ತಲುಪಿದ್ದರು. ಅಂದ್ಹಾಗೆ, ಡಿಂಗ್ಕೊ ಸಿಂಗ್ ಜೀವನಾಧರಿಸಿ ಸಿನಿಮಾವೂ ತಯಾರಾಗಿದೆ. ಶಾಹೀದ್ ಕಪೂರ್ ಡಿಂಗ್ಕೊ ಪಾತ್ರದಲ್ಲಿ ನಟಿಸಿದ್ದರು.

ಎಲ್ಲಾ ಕ್ರಿಕೆಟ್ ಪಂದ್ಯಗಳೂ ಫಿಕ್ಸ್ಡ್: ಆರೋಪಿತ ಬುಕ್ಕಿ ಸಂಜೀವ್ ಚಾವ್ಲಾಎಲ್ಲಾ ಕ್ರಿಕೆಟ್ ಪಂದ್ಯಗಳೂ ಫಿಕ್ಸ್ಡ್: ಆರೋಪಿತ ಬುಕ್ಕಿ ಸಂಜೀವ್ ಚಾವ್ಲಾ

'ಡಿಂಗ್ಕೊಗೆ ಕೊರೊನಾವೈರಸ್ ಪಾಸಿಟಿವ್ ಇದೆ. ಅವರನ್ನು ಇಂಪಾಲದ ಕ್ವಾರಂಟೈನ್ ಕೇಂದ್ರದಿಂದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ವಾರಗಳ ಹಿಂದೆ ಡಿಂಗ್ಕೊ ಮತ್ತವರ ಪತ್ನಿ ದೆಹಲಿಯಿಂದ ಹಿಂದಿರುಗಿದ್ದರು. ಅವರನ್ನು ಇಂಪಾಲದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಮೂರು ದಿನಗಳ ಹಿಂದೆ ಡಿಂಗ್ಕೊಗೆ ಜ್ವಾರ ಕಾಣಿಸಿಕೊಂಡಿತ್ತು,' ಎಂದು ಬಾಕ್ಸರ್ ಸರಿತಾ ದೇವಿ ಮಾಹಿತಿ ನೀಡಿದ್ದಾರೆ.

ವಿರಾಟ್ ಕೊಹ್ಲಿಗೆ ಹೆದರಲಾರೆ ಎಂದ ಪಾಕಿಸ್ತಾನ ವೇಗಿ ನಸೀಮ್ ಷಾವಿರಾಟ್ ಕೊಹ್ಲಿಗೆ ಹೆದರಲಾರೆ ಎಂದ ಪಾಕಿಸ್ತಾನ ವೇಗಿ ನಸೀಮ್ ಷಾ

41ರ ಹರೆಯದ ಡಿಂಗ್ಕೊ ಈಗಾಗಲೇ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರಿಗೆ ದೆಹಲಿಯಲ್ಲಿ ಕೀಮೋ ಥೆರಪಿ ನಡೆಯುವುದರಲ್ಲಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ದೆಹಲಿಗೆ ಹೋಗಲು ಡಿಂಗ್ಕೊಗೆ ಸಾಧ್ಯವಾಗದಿದ್ದಾಗ, ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ವಿಶೇಷ ವಿಮಾನದಲ್ಲಿ ದೆಹಲಿಗೆ ಕಳುಹಿಸಿಕೊಟ್ಟಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 1, 2020, 10:46 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X