For Quick Alerts
ALLOW NOTIFICATIONS  
For Daily Alerts

ಜಾರ್ಜ್ ಅಂತ್ಯಕ್ರಿಯೆಯ ವೆಚ್ಚ ಭರಿಸಲು ಮುಂದಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್

Floyd Mayweather offers to cover funeral costs for George Floyd

ನ್ಯೂಯಾರ್ಕ್, ಜೂನ್ 2: ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ 46ರ ಹರೆಯದ ಆಫ್ರಿಕನ್ ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರ ಅಂತ್ಯ ಸಂಸ್ಕಾರದ ಸಂಪೂರ್ಣ ವೆಚ್ಚ ಭರಿಸುವುದಾಗಿ ವಿಶ್ವ ಖ್ಯಾತಿಯ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಮುಂದೆ ಬಂದಿದ್ದಾರೆ. ಜಾರ್ಜ್ ಸಾವನ್ನಪ್ಪಿದ ಬೆನ್ನಲ್ಲೇ ಅಮೆರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದೆ.

ಐದು ಬಾರಿ ಡಿವಿಶನ್ ವರ್ಲ್ಡ್ ಚಾಂಪಿಯನ್ ಆಗಿರುವ ಅಮೆರಿಕಾದ ಪ್ರೊಫೆಶನಲ್ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಅವರ ಪ್ರಚಾರ ಕಂಪನಿ ಮೇವೆದರ್ ಪ್ರೊಡಕ್ಷನ್ಸ್, ಜಾರ್ಜ್ ಅಂತ್ಯಕ್ರಿಯೆ ವೆಚ್ಚ ಭರಿಸಲಿರುವುದಾಗಿ ಟ್ವಿಟರ್ ಮೂಲಕ ಖಾತರಿಪಡಿಸಿದೆ.

ಜಾರ್ಜ್ ಫ್ಲಾಯ್ಡ್ ಕುಟುಂಬಸ್ಥರೂ ಬಾಕ್ಸರ್ ಮೇವೆದರ್ ನೀಡಿದ ಆಫರ್ ಸ್ವೀಕರಿಸಿದ್ದಾರೆ ಎಂದು ಅಲ್ಲಿನ ಹೆಚ್ಚಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಿನ್ನಿಯಾಪೋಲಿಸ್‌ನ ಪೊಲೀಸ್, 44ರ ಹರೆಯದ ಡೆರೆಕ್ ಚೌವಿನ್, ಜಾರ್ಜ್ ಫ್ಲಾಯ್ಡ್ ತಲೆಯನ್ನು ಕಾಲಿನಿಂದ ಒತ್ತಿ ಹಿಡಿದಿದ್ದರಿಂದ ಜಾರ್ಜ್ ಉಸಿರಾಡಲಾಗದೆ ಸಾವನ್ನಪ್ಪಿದ್ದರು.

ಜಾರ್ಜ್ ಸಾವು ಅಮೆರಿಕಾದಾದ್ಯಂತ ಪ್ರತಿಭಟನೆಯ ಕಾವೇರಿಸಿದೆ. ಎನ್‌ಬಿಎ ದಂತಕತೆ ಮೈಕಲ್ ಜೋರ್ಡನ್, ವಿಶ್ವ ವಿಖ್ಯಾತ ಗಾಲ್ಫ್ ಚಾಂಪಿಯನ್ ಟೈಗರ್‌ ವುಡ್ಸ್, ಟೆನಿಸ್ ಆಟಗಾರ್ತಿ ನವೋಮಿ ಒಸಾಕ ಸೇರಿದಂತೆ ವಿಶ್ವದ ಬಹುತೇಕ ಕ್ರೀಡಾಪಟುಗಳು ಜಾರ್ಜ್ ಸಾವು ಖಂಡಿಸಿದ್ದಾರೆ, ವರ್ಣಬೇಧ ನೀತಿಯ ವಿರುದ್ಧ ಧ್ವನಿಯೆತ್ತಿದ್ದಾರೆ.

Story first published: Tuesday, June 2, 2020, 15:47 [IST]
Other articles published on Jun 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+