ಭಾರತದ ಮಾಜಿ ಬಾಕ್ಸರ್ ದಿಂಕೊ ಸಿಂಗ್ ನಿಧನ; ಸಂತಾಪ ಸೂಚಿಸಿದ ಕಿರೆನ್ ರಿಜಿಜು

ಭಾರತದ ಪ್ರಸಿದ್ಧ ಮಾಜಿ ಬಾಕ್ಸರ್ ದಿಂಕೊ ಸಿಂಗ್ ಗುರುವಾರ ನಿಧನ ಹೊಂದಿದ್ದಾರೆ. 42 ವರ್ಷದ ದಿಂಕೊ ಸಿಂಗ್ ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದಿಂಕೊ ಸಿಂಗ್ ಗುರುವಾರ ಮರಣ ಹೊಂದಿದ್ದು ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜಿಜು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.
1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಬಾಕ್ಸರ್ ದಿಂಕೊ ಸಿಂಗ್ ಭಾರತದ ಪರ ಚಿನ್ನವನ್ನು ಗೆದ್ದಿದ್ದರು. ಕಳೆದ ವರ್ಷ ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಕ್ಸರ್ ದಿಂಕೊ ಸಿಂಗ್ 2017ರಲ್ಲಿ ಲಿವರ್ ಸಂಬಂಧಿತ ಕ್ಯಾನ್ಸರ್‌ನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.
ಐಪಿಎಲ್ ಮುಂದುವರೆದಾಗ ಚೆನ್ನೈ ತಂಡವನ್ನು ಕಾಡಲಿದೆ ಈ ಗಂಭೀರ ಸಮಸ್ಯೆ
2020ರಲ್ಲಿ ಮತ್ತೆ ಲಿವರ್ ಸಂಬಂಧಿತ ಕ್ಯಾನ್ಸರ್‌ನ ಚಿಕಿತ್ಸೆಗಾಗಿ ದಿಂಕೊ ಸಿಂಗ್‌ರನ್ನು ದೆಹಲಿಯ ಐಎಲ್‌ಬಿಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಸಮಯದಲ್ಲಿ ದಿಂಕೊ ಸಿಂಗ್‌ಗೆ ಕಾಮಾಲೆ ರೋಗ ಕೂಡ ಇದ್ದದ್ದು ಬೆಳಕಿಗೆ ಬಂದಿತ್ತು. ಇನ್ನು ದಿಂಕೊ ಸಿಂಗ್‌ಗೆ 1998ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿರುವ ದಿಂಕೊ ಸಿಂಗ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾರತದ ಇತರ ಕ್ರೀಡಾಪಟುಗಳು ಸಂತಾಪ ಸೂಚಿಸುತ್ತಿದ್ದಾರೆ.
ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಕ್ಸರ್ ದಿಂಕೊ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು ಟ್ವೀಟ್‌ನಲ್ಲಿ "ಶ್ರೀ ದಿಂಕೊ ಸಿಂಗ್ ಅವರು ಕ್ರೀಡಾ ಸೂಪರ್ ಸ್ಟಾರ್ ಆಗಿದ್ದರು, ಅವರು ಅತ್ಯುತ್ತಮ ಬಾಕ್ಸರ್ ಆಗಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು ಮತ್ತು ಬಾಕ್ಸಿಂಗ್ ಜನಪ್ರಿಯತೆ ಹೆಚ್ಚಿಸಲು ಸಹಕರಿಸಿದ್ದರು. ಅವರು ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ" ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications