Elorda Cup 2024: ಭಾರತದ ಬಾಕ್ಸರ್‌ಗಳಿಗೆ ಶುಭಾರಂಭ
ಮೇ 13 ಸೋಮವಾರ, ಕಜಕಿಸ್ತಾನದ ಅಸ್ತಾನಾದಲ್ಲಿ ನಡೆದ 2024ರ ಎಲೋರ್ಡಾ ಕಪ್ ಟೂರ್ನಿಯಲ್ಲಿ ಆರಂಭಿಕ ದಿನದಂದು ಭಾರತದ ಹಾಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ (52 ಕೆಜಿ) ಕಝಾಕಿಸ್ತಾನ್‌ನ ರಾಖಿಂಬರ್ಡಿ ಝನ್ಸಾಯಾ ವಿರುದ್ಧ 5-0 ಅಂತರದ ಜಯದೊಂದಿಗೆ ಶುಭಾರಂಭ ಮಾಡಿದ್ದಾರೆ.
ಮಿನಾಕ್ಷಿ (48 ಕೆಜಿ) ಕಜಕಿಸ್ತಾನದ ಗಾಸಿಮೊವಾ ರೊಕ್ಸಾನಾ ವಿರುದ್ಧ 4-1 ಅಂತರದಲ್ಲಿ ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಮತ್ತೊಂದೆಡೆ, ಅನಾಮಿಕಾ ಅವರು 50 ಕೆಜಿ ವಿಭಾಗದಲ್ಲಿ ಜುಮಾಬಯೆವಾ ಅರೈಲಿಮ್ ಅವರನ್ನು ಸೋಲಿಸಿದ್ದಾರೆ. ರೆಫರಿ ಈ ಬೌಟ್ ಸ್ಥಗಿತಗೊಳಿಸುವ ಮುನ್ನ (ಆರ್‌ಎಸ್‌ಸಿ) ಮೊದಲ ಸುತ್ತಿನ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಆದರೆ, ಇಶ್ಮೀತ್ ಸಿಂಗ್ (75 ಕೆಜಿ) ಮತ್ತು ಸೋನಿಯಾ (54 ಕೆಜಿ) ಕ್ರಮವಾಗಿ ಕಜಕಿಸ್ತಾನ್‌ನ ಅರ್ಮಾನುಲಿ ಅರ್ಮಾಟ್ ಮತ್ತು ಚೀನಾದ ಚಾಂಗ್ ಯುವಾನ್ ವಿರುದ್ಧ 0-5 ರಿಂದ ಸೋತು ನಿರಾಸೆ ಮೂಡಿಸಿದರು.
6 ಬಾರಿ ಏಷ್ಯನ್ ಚಾಂಪಿಯನ್‌ಶಿಪ್‌ನ ಪದಕ ವಿಜೇತ ಶಿವ ಥಾಪಾ (63.5 ಕೆಜಿ), ಸಂಜಯ್ (80 ಕೆಜಿ) ಮತ್ತು ಗೌರವ್ ಚೌಹಾಣ್ (92+) ಸೇರಿದಂತೆ ಇತರ ಮೂವರು ಭಾರತದ ಬಾಕ್ಸರ್‌ಗಳು ಮಂಗಳವಾರ ಕಣಕ್ಕಿಳಿಯಲಿದ್ದಾರೆ. ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾವು ಪ್ರತಿಷ್ಠಿತ ಈ ಪಂದ್ಯಾವಳಿಗೆ 21 ಸದಸ್ಯರ ತಂಡವನ್ನು ಕಳುಹಿಸಿದೆ. ಬಲಿಷ್ಠ ಬಾಕ್ಸಿಂಗ್ ರಾಷ್ಟ್ರಗಳಾದ ಕಝಾಕಿಸ್ತಾನ್, ಚೀನಾ, ಭಾರತ, ಜಪಾನ್ ಮತ್ತು ಉಜ್ಬೇಕಿಸ್ತಾನ್‌ನ ಪಗುಲಿಸ್ಟ್‌ಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ.
2024ರ ಎಲೋರ್ಡಾ ಕಪ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಬಾಕ್ಸರ್‌ಗಳ ಸಂಪೂರ್ಣ ಪಟ್ಟಿ
ಪುರುಷರ ತಂಡ : ಯೈಫಾಬಾ ಸಿಂಗ್ ಸೊಯಬಮ್ (48 ಕೆಜಿ), ಪವನ್ ಬರ್ತ್ವಾಲ್ (54 ಕೆಜಿ), ಕವಿಂದರ್ ಸಿಂಗ್ ಬಿಶ್ತ್ (57 ಕೆಜಿ), ವರೀಂದರ್ ಸಿಂಗ್ (60 ಕೆಜಿ), ಶಿವ ಥಾಪಾ (63.5 ಕೆಜಿ), ಅಭಿಷೇಕ್ ಯಾದವ್ (67 ಕೆಜಿ), ಹಿತೇಶ್ (71 ಕೆಜಿ), ಇಶ್ಮೀತ್ ಸಿಂಗ್ (75 ಕೆಜಿ), ಸಂಜಯ್ (80 ಕೆಜಿ), ವಿಶಾಲ್ (86 ಕೆಜಿ), ಮತ್ತು ಗೌರವ್ ಚೌಹಾಣ್ (92+ ಕೆಜಿ).
ಮಹಿಳಾ ತಂಡ: ಮಿನಾಕ್ಷಿ (48 ಕೆಜಿ), ಅನಾಮಿಕಾ (50 ಕೆಜಿ), ನಿಖತ್ ಜರೀನ್ (52 ಕೆಜಿ), ಸೋನಿಯಾ (54 ಕೆಜಿ), ಮನೀಶಾ (60 ಕೆಜಿ), ಸೋನು (63 ಕೆಜಿ), ಮಂಜು ಬಂಬೋರಿಯಾ (66 ಕೆಜಿ), ಶಲಾಖಾ ಸಿಂಗ್ (70 ಕೆಜಿ), ಲಾಲ್ಫಕ್ಮಾವಿ ರಾಲ್ಟೆ ( 81ಕೆಜಿ), ಮತ್ತು ಮೋನಿಕಾ (81+ಕೆಜಿ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications