Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಐ ಆ್ಯಮ್ ಬ್ಯಾಕ್': ಮೈಕ್ ಟೈಸನ್ ಅಭ್ಯಾಸದ ವೈರಲ್ ವೀಡಿಯೋ ನೋಡಿ!

‘I’m back’: Mike Tyson again hints at comeback

ಬೆಂಗಳೂರು, ಮೇ 12: ವರ್ಲ್ಡ್ ಹೆವಿವೇಟ್ ಮಾಜಿ ಚಾಂಪಿಯನ್, ಅಮೆರಿಕಾದ ಮೈಕ್ ಟೈಸನ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಹಾಕಿದ್ದಾರೆ. ಮೈ ಜುಂ ಅನ್ನುವಂತೆ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಿರುವ ಈ ವೀಡಿಯೋ ಮೂಲಕ ಟೈಸನ್ ತಾನು ರಿಂಗ್‌ಗೆ ಮರಳುವ ಸಾಧ್ಯತೆಯ ಮುನ್ಸೂಚನೆ ನೀಡಿದ್ದಾರೆ.

ಸೋಮವಾರ (ಮೇ 11) ಶೇರ್ ಮಾಡಿಕೊಂಡಿದ್ದ ವೀಡಿಯೋದಲ್ಲಿ ಟೈಸನ್ ತನ್ನ ಕೋಚ್‌ ಜೊತೆ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಿರುವ ದೃಶ್ಯವಿದೆ. ವೀಡಿಯೋದ ಕೊನೆಯಲ್ಲಿ ಟೈಸನ್, 'ಐ ಆ್ಯಮ್ ಬ್ಯಾಕ್' ಅಂದಿದ್ದಾರೆ. ಇದರರ್ಥ ಟೈಸನ್ ಶೀಘ್ರ ಮತ್ತೆ ಗುದ್ದಾಟಕ್ಕಿಳಿಯಲಿದ್ದಾರೆ ಅನ್ನೋದು.

53ರ ಹರೆಯದ ಮೈಕ್ ಟೈಸನ್ ಕಳೆದ ವಾರವೂ ವೀಡಿಯೋವನ್ನು ಹಂಚಿಕೊಂಡಿದ್ದರು. ಇರದಲ್ಲೂ ವೇಗವಾಗಿ ಮತ್ತು ಬಲವಾಗಿ ಗುದ್ದುಗಳನ್ನು ಕೊಡುತ್ತ ಅಭ್ಯಾಸ ನಡೆಸುತ್ತಿದ್ದ ದೃಶ್ಯವಿತ್ತು. ವೇಗವಾಗಿ ಮತ್ತು ಬಲಿಷ್ಠ ಗುದ್ದುಗಳನ್ನು ನೀಡುವ ವಿಶಿಷ್ಠ ರೀತಿಗಾಗೇ ಟೈಸನ್‌ ವರ್ಲ್ಡ್ ಬಾಕ್ಸಿಂಗ್ ಅಸೋಸಿಯೇಶನ್ (ಡಬ್ಲ್ಯೂಬಿಎ), ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ (ಡಬ್ಲ್ಯೂಬಿಸಿ) ಇಂಟರ್ ನ್ಯಾಷನಲ್ ಬಾಕ್ಸಿಂಗ್ ಫೆಡರೇಶನ್ (ಐಬಿಎಫ್‌) ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕಳೆದ ವಾರದ ವೀಡಿಯೋದಲ್ಲೂ ಟೈಸನ್‌ ರಿಂಗ್‌ ಮರಳುವತ್ತ ತಾನು ಯೋಚಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಚಾರಿಟಿಗಾಗಿ ದೇಣಿಗೆ ಸಂಗ್ರಹಿಸಲು ತಾನು ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿರುವುದಾಗಿ ಟೈಸನ್ ನುಡಿದಿದ್ದರು. ಅಂದ್ಹಾಗೆ, ವಿಶ್ವ ಬಾಕ್ಸಿಂಗ್‌ನಲ್ಲಿ 'ಸೋಲಿಲ್ಲದ ವರ್ಲ್ಡ್ ಹೆವಿವೇಟ್ ಚಾಂಪಿಯನ್' ಎಂಬ ಹೆಸರು ಟೈಸನ್‌ಗಿದೆ.

Story first published: Tuesday, May 12, 2020, 11:24 [IST]
Other articles published on May 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+