ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಭಾರತದ ಲೊವ್ಲಿನಾ ಬೊರ್ಗೋಹೈನ್
ಭಾರತದ ಸ್ಟಾರ್ ಬಾಕ್ಸರ್ ಲೊವ್ಲಿನ ಬೊರ್ಗೋಹೈನ್ ಇತ್ತೀಚೆಗಷ್ಟೇ ಮುಕ್ಯಾಗೊಂಡಿರುವ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದು ಇದರ ಜೊತೆಗೆ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಅವರು ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ. ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಸಂಪಾದಿಸಿರುವುದಕ್ಕೆ ಬೊರ್ಗೋಹೈನ್ ಸಂತಸವನ್ನು ಹಂಚಿಕೊಂಡಿದ್ದಾರೆ.
ಇಂಡಿಯಾ ಟುಡೇ ನೀಡಿದ ಸಂದರ್ಭಶನದಲ್ಲಿ ಮಾತನಾಡಿದ ಲೊವ್ಲಿನಾ, ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ತನ್ನ ಗುರಿಯಾಗಿತ್ತು, ಫೈನಲ್ ಗೆಲ್ಲಲು ಸಾಧ್ಯವಾಗಲಿಲ್ಲ ಆದರೆ ತನ್ನ ಪ್ರದರ್ಶನದಿಂದ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಲೊವ್ಲಿನಾ ಭಾರತದ 74ನೇ ಏಷ್ಯನ್ ಗೇಮ್ಸ್ ಪದಕ ಮತ್ತು ಬಾಕ್ಸಿಂಗ್‌ನಲ್ಲಿ 5ನೇ ಪದಕವನ್ನು ಗೆದ್ದುಕೊಂಡರು.

"ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿತ್ತು. ನನ್ನ ವೈಯಕ್ತಿಕ ಅನುಭವವೂ ಅದ್ಭುತವಾಗಿತ್ತು. 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನನ್ನ ಗುರಿಯಾಗಿತ್ತು. ಇದು ನನ್ನ ದೊಡ್ಡ ಸಾಧನೆಯಾಗಿದೆ. ನಾನು ಫೈನಲ್‌ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಆದರೆ ನನ್ನ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ. ನನ್ನ ಫೈನಲ್ ಚೀನಾದ ಎದುರಾಳಿಯ ವಿರುದ್ಧವಾಗಿತ್ತು. ಹಾಗಾಗಿ ಪ್ರೇಕ್ಷಕರು ಕೂಡ ನನ್ನ ಎದುರಾಳಿಗೆ ಬೆಂಬಲವಾಗಿದ್ದರು" ಎಂದಿದ್ದಾರೆ ಲೊವ್ಲಿನಾ.
"ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಎದುರಾಳಿಯನ್ನು ಸೋಲಿಸಿದ್ದೆ ಆದರೆ ಈ ಬಾರಿ ನನಗೆ ಸಾಧ್ಯವಾಗಲಿಲ್ಲ. ಆದರೆ ನಾನು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದು ಅದಕ್ಕಾಗಿಯೇ ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ. ನಾನು ಬಹಳಷ್ಟು ಕಲಿತಿದ್ದೇನೆ ಮತ್ತು ಅಲ್ಲಿನ ವಾತಾವರಣವೂ ತುಂಬಾ ಚೆನ್ನಾಗಿತ್ತು" ಎಂದು ಲೊವ್ಲಿನಾ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಪೂರ್ವ ರಾಜ್ಯವಾದ ಅಸ್ಸಾಂನಿಂದ ದಿರುವ ಲೊವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ರಿಂಗ್‌ನಲ್ಲಿ ತನ್ನ ಆಕ್ರಮಣಕಾರಿ ಮತ್ತು ದೃಢ ಪ್ರದರ್ಶನದಿಂದ ನಿರಂತರವಾಗಿ ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಈ ಹೆಮ್ಮೆಯ ಆಟಗಾರ್ತಿಯ ಬೆಳ್ಳಿ ಪದಕದ ಗೆಲುವು ಆಕೆಯ ಸಾಧನೆಗಳ ಪಟ್ಟಿಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ. ಪ್ರತಿಭಾನ್ವಿತ ಪ್ಯೂಜಿಲಿಸ್ಟ್ ಅಗಾಧವಾದ ಗ್ರಿಟ್ ಮತ್ತು ದೃಢತೆಯನ್ನು ಪ್ರದರ್ಶಿಸಿದರು ಆದರೆ ರೋಮಾಂಚಕ ಅಂತಿಮ ಪಂದ್ಯದಲ್ಲಿ ತನ್ನ ಎದುರಾಳಿ, ಅನುಭವಿ ಚೈನೀಸ್ ಬಾಕ್ಸರ್ ಲಿ ಕಿಯಾನ್ ವಿರುದ್ಧ ಸೋತರು.
ಪ್ಯಾರಿಸ್ ಒಲಿಂಪಿಕ್ಸ್ 2024ರ ಬಾಕ್ಸಿಂಗ್‌ಗೆ ಏಷ್ಯನ್ ಗೇಮ್ಸ್ ಅರ್ಹತಾ ಸುತ್ತು ಕೂಡ ಆಗಿತ್ತು. ಪುರುಷರ ವಿಭಾಗದಲ್ಲಿ ಎಲ್ಲಾ ಏಳು ತೂಕ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತರು ಪ್ಯಾರಿಸ್ 2024 ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಮಹಿಳೆಯರ ವಿಭಾಗಗಳಲ್ಲಿ 66 ಕೆಜಿ ಮತ್ತು 75 ಕೆಜಿ ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳಲ್ಲಿಯೂ 4 ಕೋಟಾಗಳು ಲಭ್ಯವಿತ್ತು. ಆದರೆ ಈ ಎರಡು ವಿಭಾಗಗಳಲ್ಲಿ ಪುರುಷರ ವಿಭಾಗದಂತೆಯೇ 2 ಕೋಟಾಗಳು ಮಾತ್ರವೇ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications