ಮಾಜಿ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಸೋಲಿಸಿದ ಜೇಕ್ ಪೌಲ್; ಮೆಗಾ ಫೈಟ್‌ನಿಂದ ಇಬ್ಬರೂ ಗಳಿಸಿದ ಹಣವೆಷ್ಟು?
ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ&ಟಿ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 15) ನಡೆದ ಬ್ಲಾಕ್‌ಬಸ್ಟರ್ ಬಾಕ್ಸಿಂಗ್ ಪಂದ್ಯದಲ್ಲಿ ಮಾಜಿ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ವಿರುದ್ಧ ಯೂಟ್ಯೂಬರ್ ಮತ್ತು ಬಾಕ್ಸರ್ ಜೇಕ್ ಪೌಲ್ ಐತಿಹಾಸಿ ಗೆಲುವು ಸಾಧಿಸಿದರು. 2 ದಶಕಗಳ ನಂತರ ರಿಂಗ್ ಪ್ರವೇಶಿಸಿದ ಮೈಕ್ ಟೈಸನ್‌ಗೆ ಸೋಲು ಆಘಾತ ನೀಡಿದೆ. ಒಂದು ಕಾಲದಲ್ಲಿ ಮೈಕ್ ಟೈಸನ್ ಎದುರು ತೊಡೆ ತಟ್ಟಲು ಎದುರಾಳಿಗಳು ಹಿಂಜರಿಯುತ್ತಿದ್ದರು. ಆದರೆ 20 ವರ್ಷಗಳ ಬಳಿಕ ಮೈಕ್ ಟೈಸನ್ ಸೋಲು ಕಂಡಿದ್ದಾರೆ.
ಮೈಕ್ ಟೈಸನ್ ಮತ್ತು ಜೇಕ್ ಪೌಲ್ ಕಾದಾಟ ನೋಡಿ ಕಣ್ತುಂಬಿ ಜಗತ್ತು ಕಾದು ಕುಳಿತ್ತು. ಆದರೆ 58 ವರ್ಷದ ಮೈಕ್ ಟೈಸನ್ ಅವರ ನಿಧಾನಗತಿ ಆಟದಿಂದ ಜೇಕ್ ಪೌಲ್ ಪ್ರಾಬಲ್ಯ ಸಾಧಿಸಿದರು. ಮೊದಲ 2 ಸುತ್ತುಗಳಲ್ಲಿ ಟೈಸನ್ ಮೇಲುಗೈ ಸಾಧಿಸಿದರು. ಇದಾದ ಬಳಿಕ ಅದ್ಭುತ ಪುನರಾಗಮನ ಮಾಡಿದ ಜೇಕ್ ಪೌಲ್, ಮೈಕ್ ಟೈಸನ್ ಅವರನ್ನು ಸರ್ವಾನುಮತದ ನಿರ್ಧಾರದ ಮೂಲಕ ಸೋಲಿಸಿದ್ದಾರೆ. ಇಬ್ಬರು ನಡುವೆ 2 ನಿಮಿಷಗಳಂತೆ 8 ಸುತ್ತುಗಳು ಬಾಕ್ಸಿಂಗ್ ಪಂದ್ಯ ನಡೀತು. ಮೈಕ್ ಟೈಸನ್ ವಿರುದ್ಧ 79-73 ಅಂಕಗಳ ಅಂತರದಲ್ಲಿ ಪೌಲ್ ಗೆದ್ದರು. ಟೈಸನ್ ನಿಧನಗತಿ ಆಟ ಪ್ರದರ್ಶಿಸಿದರೂ ಕೂದಲೆಳೆ ಅಂತರದಲ್ಲಿ ಮೆಗಾಫೈಟ್ ಸೋತರು.

ಬಾಂಕ್ಸಿಂಗ್ ಲೋಕದಲ್ಲಿ ಮೈಕ್ ಟೈಸನ್ ಘಟಾನುಘಟಿಗಳನ್ನು ಸೋಲಿಸಿದ್ದಾರೆ. 2003ರಲ್ಲಿ ಅವರು ಮೈಕ್ ಟೈಸನ್ ಕೊನೆಯದಾಗಿ ಪಂದ್ಯವನ್ನು ಗೆದ್ದಿದ್ದರು. ಇದಾದ ನಂತರ 2004 ಮತ್ತು 2005ರಲ್ಲಿ ಸೋಲು ಕಂಡು ಮೈಕ್ ಟೈಸನ್ ಬಾಕ್ಸಿಂಗ್ ರಿಂಗ್‌ನಿಂದ ದೂರವುಳಿದಿದ್ದರು. ಇದೀಗ 20 ವರ್ಷಗಳ ನಂತರ ರಿಂಗ್‌ಗೆ ಮರಳಿದ ಮೈಕ್ ಟೈಸನ್ ಮತ್ತೆ ಸೋಲು ಅನುಭವಿಸಿದದ್ದಾರೆ.
ಟೈಸನ್-ಪೌಲ್ ಗಳಿಸದ ಹಣ ಎಷ್ಟು?
ನೆಟ್ ಫ್ಲಿಕ್ಸ್ ಪ್ರಾಯೋಜಕತ್ವದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಮೈಕ್ ಟೈಸನ್ ಮತ್ತು ಜೇಕ್ ಪೌಲ್ ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಆದರೆ, ಇಬ್ಬರೂ ಬಾಕ್ಸರ್‌ಗಳಿಗೆ ಎಷ್ಟು ಹಣ ನೀಡಲಾಗಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ವರದಿಗಳ ಪ್ರಕಾರ, ಈ ಮೆಗಾ ಫೈಟ್‌ನಲ್ಲಿ ವಿಜಯಶಾಲಿಯಾದ ಜೇಕ್ ಪಾಲ್ 40 ಮಿಲಿಯನ್ ಯುಎಸ್ ಡಾಲರ್ (ಸುಮಾರು 337 ಕೋಟಿ ರೂ.) ಗಳಿಸಿದ್ದಾರೆ. ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ 20 ಮಿಲಿಯನ್ ಯುಎಸ್ ಡಾಲರ್ (ಸುಮಾರು 168 ಕೋಟಿ ರೂ.) ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications