ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇತಿಹಾಸ ಬರೆದ ಭಾರತದ ಮೇರಿ ಕೋಮ್

ಉಲಾನ್-ಉಡೆ, ಅಕ್ಟೋಬರ್ 12: ಬಾಕ್ಸಿಂಗ್ ವರ್ಲ್ಡ್ ಚಾಂಪಿಯನ್‌ಷಿಪ್ 2019ರಲ್ಲಿ ಭಾರತದ ಬಾಕ್ಸರ್ ಮೇರಿ ಕೋಮ್ ಕಂಚಿನ ಪದಕದೊಂದಿಗೆ ಸ್ಪರ್ಧೆ ಮುಗಿಸಿದ್ದಾರೆ. 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೋಮ್, ಸೆಮಿ ಫೈನಲ್‌ನಲ್ಲಿ ಯುರೋಪಿಯನ್ ಚಾಂಪಿಯನ್, ಟರ್ಕಿಯ ಬುಸೆನಾಜ್ ಕಾಕಿರೊಗ್ಲು ಎದುರು ಹಿನ್ನಡೆ ಅನುಭವಿಸಿದರು.
ರಷ್ಯಾದ ಉಲಾನ್ ಉಡೆಯಲ್ಲಿ ಶನಿವಾರ (ಅಕ್ಟೋಬರ್ 11) ನಡೆದ ಸೆಮಿಫೈನಲ್‌ನಲ್ಲಿ ಮೇರಿ ಕೋಮ್ ವಿವಾದಾತ್ಮಕ ತೀರ್ಪಿನಲ್ಲಿ 1:4ರ ಸೋಲು ಕಂಡಿದ್ದಾರೆ. ಆದರೆ ಭಾರತದ ಹೆಮ್ಮೆ ಮೇರಿಗೆ ಇದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಲಭಿಸುತ್ತಿರುವ 8ನೇ ಐತಿಹಾಸಿಕ ಪದಕ.
ವಿಶ್ವ ಚಾಂಪಿಯನ್‌ಷಿಪ್‌ನ ಪದಕಗಳ ಲೆಕ್ಕಾಚಾರದಲ್ಲಿ ಮೇರಿ, ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವಿಶ್ವ ನಂ.1 ಬಾಕ್ಸರ್ ಆಗಿ ಕಾಣಿಸುತ್ತಾರೆ. ಕೋಮ್ ಒಟ್ಟಿಗೆ 6 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಗೆದ್ದಿದ್ದಾರೆ. ಇನ್ನು ಪುರುಷರ ವಿಭಾಗದ ಯಶಸ್ವಿ ಬಾಕ್ಸರ್ ಕೂಬಾದ ಫೆಲಿಕ್ಸ್ ಸಾವನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 6 ಬಂಗಾರ, 1 ಬೆಳ್ಳಿ ಪದಕ ಗೆದ್ದ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications