ಐತಿಹಾಸಿಕ 8ನೇ ವಿಶ್ವ ಪದಕ ಖಾತ್ರಿ ಪಡಿಸಿದ ಬಾಕ್ಸರ್ ಮೇರಿ ಕೋಮ್

ಉಲಾನ್-ಉಡೆ, ಅಕ್ಟೋಬರ್ 10: ಆರು ಬಾರಿಯ ವಿಶ್ವ ಚಾಂಪಿಯನ್, ಭಾರತದ ಬಾಕ್ಸರ್ ಮೇರಿ ಕೋಮ್ ಗುರುವಾರ (ಅಕ್ಟೋಬರ್ 10) ವಿಶ್ವ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ 8ನೇ ಪದಕ ಖಾತರಿಪಡಿಸಿದ್ದಾರೆ. ರಷ್ಯಾದ ಉಲಾನ್-ಉಡೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಮೇರಿ ಸೆಮಿಫೈನಲ್‌ಗೆ ಮುನ್ನಡೆ ಸಾಧಿಸಿದ್ದಾರೆ.
51 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಮೇರಿ, ಕೊಲಂಬಿಯಾದ ವೇಲೆನ್ಸಿಯಾ ವಿಕ್ಟೋರಿಯಾ ವಿರುದ್ಧ 5-0ಯ ಜಯ ದಾಖಲಿಸಿ ಸೆಮಿಪೈನಲ್‌ಗೆ ಪ್ರವೇಶಿಸಿದ್ದಾರೆ. ಈ ಗೆಲುವಿನೊಂದಿಗೆ ಮೇರಿ ತನ್ನದೇ ದಾಖಲೆಯನ್ನು ಸುಧಾರಿಸಿಕೊಂಡಿದ್ದಾರೆ.
ವಿಶ್ವ ಬಾಕ್ಸಿಂಗ್ ಇತಿಹಾಸದಲ್ಲಿ ಅತೀ ಯಶಸ್ವಿ ಬಾಕ್ಸರ್ ಆಗಿ ಭಾರತದ ಮೇರಿ ಗುರುತಿಸಿಕೊಂಡಿದ್ದಾರೆ. ಈ ವಿಶ್ವ ಟೂರ್ನಿ ಅರಂಭಕ್ಕೂ ಮುನ್ನ ಮೇರಿ ಹೆಸರಿನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ 6 ಬಂಗಾರದ ಪದಕಗಳು ಮತ್ತು 1 ಬೆಳ್ಳಿ ಪದಕ ಇತ್ತು. 48 ಕೆಜಿ ವಿಭಾಗದಲ್ಲಿ ಮೇರಿ ಈ ಪದಕಗಳನ್ನು ಜಯಿಸಿದ್ದರು.
Story first published: Thursday, October 10, 2019, 17:05 [IST]
Other articles published on Oct 10, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications